ಮೂರು ವರ್ಷದಲ್ಲಿ ನಾಲ್ಕು ಮದುವೆ: ಅಸಲಿ ಮದುವೆ -ನಕಲಿ ಹೆಣ್ಣು, ಪಾಪಿ ಗಂಡು – ಆತುರಪಟ್ಟರೆ ಮಕ್ಮಲ್‌ ಟೋಪಿ ಗ್ಯಾರಂಟಿ

0
Spread the love

ತುಮಕೂರು: ಮದುವೆಯಾಗದ ಅವಿವಾಹಿತರು ನೋಡಲೇ ಬೇಕಾದ ಸ್ಟೋರಿ ಇದು. ವಯಸ್ಸು ಮೀರಿ ಹೋಗುತ್ತಿದೆ ಅಂತ ಆತುರಪಟ್ಟರೆ ಮಕ್ಮಲ್‌ ಟೋಪಿ ಗ್ಯಾರೆಂಟಿ ಆಗುತ್ತೆ.

Advertisement

ಸಿಕ್ಕಿದ್ದೆ ಸೀರುಂಡೆ ಅಂತ ಕಣ್ಮುಚ್ಚಿಕೊಂಡು ಹೆಣ್ಣು ಒಪ್ಪಿಕೊಳ್ಳುವ ಮುನ್ನ ಎಚ್ಚರವಹಿಸುವುದು ಉತ್ತಮ ಯಾಕಂದ್ರೆ. ಮದುವೆ ಹೆಸರಲ್ಲಿ ಅವಿವಾಹಿತರನ್ನೇ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಅನ್ನು ಬಂಧಿಸುವಲ್ಲಿ ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದುಮಗಳು ಕೋಮಲಾ @ ಲಕ್ಷ್ಮೀ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಬಂಧಿತರು.

ಹೌದು ಗ್ರಾಮದ ಪಾಲಾಕ್ಷಯ್ಯ ಎಂಬವರು ತಮ್ಮ ಮಗ ದಯಾನಂದಮೂರ್ತಿಗೆ 37 ವರ್ಷ ದಾಟಿದರೂ ಹೆಣ್ಣು ಸಿಗದೇ ನೊಂದಿದ್ದರು. ಕುಷ್ಟಗಿ ಮೂಲದ ಬಸವರಾಜು ಎಂಬಾತನ ಮೂಲಕ ಹುಬ್ಬಳ್ಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು.

ಮದುವೆ ಬ್ರೋಕರ್‌ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು.

ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನ ಮಾಡಿದ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬಳು ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಳು.

ಕೋಮಲಾ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿದ್ದಳು. ಬಳಿಕ ಹುಡುಗಿಯನ್ನು ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು. ಆಕೆಯ ಸಂಬಂಧಿಕರು ಎಂದು ಇನ್ನೂ ಐದಾರು ಜನರನ್ನು ಕರೆತಂದಿದ್ದಳು.

ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆಮುಂದೆ ಯೋಚಿಸದೆ ಮದುವೆ ಮಾಡಿಸಿದ್ದರು. ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನ ಸೇರಿದ್ದು, ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ನೀಡಿದ್ದರು.

ವಧುವಿಗೆ 25 ಗ್ರಾಂ ಚಿನ್ನಾಭರಣ ಹಾಕಲಾಗಿತ್ತು. ಹೆಣ್ಣು ತೋರಿಸಿದ ಬ್ರೋಕರ್‌ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನು ಬ್ರೋಕರ್‌ ಲಕ್ಷ್ಮಿ ಕರೆ ತಂದಿದ್ದಳು.

ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ನೆಪ ಹೇಳಿ ಹಣ-ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಸೊಸೆ ವಾಪಸ್‌ ಬಂದಿರಲಿಲ್ಲ.

ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ, ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್‌ ಗುಬ್ಬಿಗೆ ಬಂದ ಪಾಲಾಕ್ಷಯ್ಯ ಎಲ್ಲರ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗುಬ್ಬಿ ಪೊಲೀಸರು ತನಿಖೆ ನಡೆಸಿದ್ದರು.

ಒಂದು ವರ್ಷದಿಂದ ದೋಖಾ ಕುಟುಂಬ ತಲೆ ಮರೆಸಿಕೊಂಡಿತ್ತು. ಮಹಾರಾಷ್ಟ್ರ, ಹುಬ್ಬಳ್ಳಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here