ಯಾದಗಿರಿ: ಪ್ರತಿ ಬಾರಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಹಿಂದೆ ಬಿದ್ದ ಯಾದಗಿರಿ ಜಿಲ್ಲೆ ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಗಮನ ಸೆಳೆದಿದೆ.
ಈ ಬಾರಿ ನಾಲ್ವರು ಅಭ್ಯರ್ಥಿಗಳು ಯುಪಿಎಸ್‌ಸಿನಲ್ಲಿ ರ‍್ಯಾಂಕ್ ಪಡೆದು ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಹಿಂದುಳಿದ ಜಿಲ್ಲೆ ಎಂಬ ಶಾಪವನ್ನೂ ಕಳಚಿದ್ದಾರೆ.
ಸಂದೀಪ್ ಬಾಡದ್:- ಶಹಾಪುರ ತಾಲ್ಲೂಕಿನ ಕಿರಾಣಿ ವ್ಯಾಪಾರಿ ಮಗ – 82ನೇ ರ‍್ಯಾಂಕ್
ನಿವೇದಿತಾ ಸಿ. ಭಾವಿಮನಿ:- ಬಸವೇಶ್ವರ ನಗರ – 469ನೇ ರ‍್ಯಾಂಕ್
ಬಸವರಾಜ ಜವಳಿ:- ಶಹಾಪುರ – 664ನೇ ರ‍್ಯಾಂಕ್
ಚಂದ್ರಶೇಖರ:- ಶಹಾಪುರ ತಾಲ್ಲೂಕಿನ ಚೆನ್ನೂರು ಗ್ರಾಮದ ರೈತನ ಮಗ – 880ನೇ ರ‍್ಯಾಂಕ್
ಇದೆ ಸಂದರ್ಭದಲ್ಲಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಸಣ್ಣಪ್ಪ ಕಮತೆ ಪುತ್ರ ಕಿರಣ್ ಕಮತೆ 53ನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ನಂಬರ್ 1 ಸಾಧನೆ ತಂದುಕೊಟ್ಟಿದ್ದಾರೆ. ಬೆಂಗಳೂರಿನ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿರುವ ಕಿರಣ ಕಮತೆ 6ನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.



