ರಾಯಚೂರು:- ಜಿಲ್ಲೆಯಲ್ಲಿ ಎಫ್‌ಪಿವಿ ವೈರಸ್ ಭೀತಿ ಹೆಚ್ಚಾಗಿದ್ದು, ರಾಯಚೂರಿನಲ್ಲಿ ಬರೋಬ್ಬರಿ 38 ಬೆಕ್ಕು ಸಾವನ್ನಪ್ಪಿರುವುದು ಆತಂಕಕ್ಕೀಡು ಮಾಡಿದೆ.
Advertisement
ರಾಜ್ಯದೆಲ್ಲೆಡೆ ಬೆಕ್ಕುಗಳಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಎಫ್‌ಪಿವಿ ವೈರಸ್ ಈ ಬಾರಿ ರಾಯಚೂರಿನ ಬೆಕ್ಕುಗಳನ್ನ ಹೆಚ್ಚು ಬಾಧಿಸುತ್ತಿದೆ. ರಾಯಚೂರಿನಲ್ಲಿ ಇದುವರೆಗೆ 100ಕ್ಕೂ ಹೆಚ್ಚು ಬೆಕ್ಕುಗಳಲ್ಲಿ ಫಿಲೈನ್ ಪ್ಯಾನ್‌ಲೀಕೊಪೇನಿಯಾ ವೈರಸ್ ಪತ್ತೆಯಾಗಿದೆ. ಇದರಲ್ಲಿ 62 ಬೆಕ್ಕುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿವೆ. ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಬೆಕ್ಕುಗಳು ಸಾವನ್ನಪ್ಪುತ್ತಿವೆ.
ಪ್ರತೀ ವರ್ಷಕ್ಕಿಂತ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿದ್ದು ಬೆಕ್ಕು ಪ್ರಿಯರು ಆತಂಕಕ್ಕೊಳಗಾಗಿದ್ದಾರೆ.