IPL 2025: ಖರೀದಿಗೆ ಮುಂದಾಗದ ಪ್ರಾಂಚೈಸಿಗಳು: ಐಪಿಎಲ್​ನಲ್ಲಿ ಡೇವಿಡ್ ವಾರ್ನರ್ ಯುಗಾಂತ್ಯ!

0
Spread the love

IPL 2025ರ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯ ಆಗಿದ್ದು, ಈ ವೇಳೆ ಹರಾಜಿನಲ್ಲಿದ್ದ ಡೇವಿಡ್ ವಾರ್ನರ್ ಖರೀದಿಗೆ ಯಾವ ಪ್ರಾಂಚೈಸಿಗಳು ಆಸಕ್ತಿ ತೋರಿಲ್ಲ ಎನ್ನಲಾಗಿದೆ.

Advertisement

ಹೀಗಾಗಿ ಮುಂಬರುವ ಐಪಿಎಲ್​ನಲ್ಲಿ ಆಸೀಸ್​ನ ಎಡಗೈ ದಾಂಡಿಗ ಕಾಣಿಸಿಕೊಳ್ಳುವುದಿಲ್ಲ. ಅಂತಿಮ ಸುತ್ತಿನ ಶಾರ್ಟ್ ಲಿಸ್ಟ್​​ನಲ್ಲೂ ವಾರ್ನರ್​ಗೆ ಸ್ಥಾನ ಲಭಿಸಿಲ್ಲ. ಈ ಮೂಲಕ ಡೇವಿಡ್ ವಾರ್ನರ್ ಅನ್​ಸೋಲ್ಡ್ ಆಗಿಯೇ ಉಳಿದಿದ್ದಾರೆ.

ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ವಾರ್ನರ್​​​ ಈ ಬಾರಿ ಕೂಡ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ 38 ವರ್ಷದ ವಾರ್ನರ್​ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ. ಇದರೊಂದಿಗೆ ಐಪಿಎಲ್​ನಲ್ಲಿ ವಾರ್ನರ್ ಅವರ ಯುಗಾಂತ್ಯವಾಗಿದೆ ಎಂದೇ ಹೇಳಬಹುದು.

ಏಕೆಂದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ವಾರ್ನರ್​​ಗೆ ಮತ್ತೆ ಐಪಿಎಲ್​​ನಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ. ಅಲ್ಲದೆ ಮುಂದಿನ ಸೀಸನ್ ಮಿನಿ ಹರಾಜಿನ ಮೂಲಕ ಕಂಬ್ಯಾಕ್ ಮಾಡುವುದು ಕೂಡ ಅನುಮಾನ. ಹೀಗಾಗಿಯೇ ಐಪಿಎಲ್​ನಲ್ಲಿ ಡೇವಿಡ್ ವಾರ್ನರ್ ಅವರ ಯುಗಾಂತ್ಯವಾಗಿದೆ ಎನ್ನಬಹುದು.


Spread the love

LEAVE A REPLY

Please enter your comment!
Please enter your name here