ಹಾಸನ: ಎಟಿಎಂಗಳಿಗೆ ಹಣ ಹಾಕದೇ ವಂಚನೆ ಮಾಡಿದ ಆರೋಪದಲ್ಲಿ ಸಿಎಂಎಸ್ ಕಂಪನಿಯ ಇಬ್ಬರು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಡಾವಣೆ ಪೊಲೀಸ್ ಠಾಣೆಯಲ್ಲಿ ಸಿಎಂಎಸ್ ಬ್ರಾಂಚ್ ಮ್ಯಾನೇಜರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬೂವನಹಳ್ಳಿ ಗ್ರಾಮದ ನಂದೀಶ್ ಬಿ.ಎಲ್ ಹಾಗೂ ದಾಸರಕೊಪ್ಪಲಿನ ಮಧುಕುಮಾರ್ ಎಂ.ಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು, 3,40,28,200 ರೂ. ಹಣವನ್ನು ಹದಿನೈದು ಎಟಿಎಂಗಳಿಗೆ ಹಂಚದೆ ದುರುಪಯೋಗ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಸಂಬಂಧ ಬಿಎನ್ಎಸ್ 316(4), 318(4), 3(5) ಅಡಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ಕೈಗೊಂಡಿದ್ದಾರೆ.



