ಹಣ ಹೂಡಿಕೆ ಮಾಡಿದ್ರೆ ಡಬಲ್ ಮಾಡುವುದಾಗಿ ವಂಚನೆ: ಬರೋಬ್ಬರಿ 91 ಲಕ್ಷ ಕಳೆದುಕೊಂಡ ಮಹಿಳೆ!

0
Be aware of cybercrime
Spread the love

ಚಿಕ್ಕಮಗಳೂರು:- ಹಣ ಡಬಲ್ ಮಾಡುವ ಆಸೆಗೆ ಬಿದ್ದು ಮಹಿಳೆ 91 ಲಕ್ಷ ಹಣ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ಜರುಗಿದೆ. ಆನ್ ಲೈನ್ ವಂಚಕರ ಮಾತು ನಂಬಿ ಹಣ ಮಾಡುವ ಆಸೆಗೆ ಬಿದ್ದ ಮಹಿಳೆ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

Advertisement

ಫೇಸ್ಬುಕ್ನಲ್ಲಿ ಬಂದ ಜಾಹೀರಾತು ನೋಡಿ ಹಣ ಡಬಲ್ ಮಾಡುವ ಆಸೆಗೆ ಬಿದ್ದ ಮಹಿಳೆ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್‌ಗೆ ಹಣ ಹಾಕಿ ಕಂಗಾಲಾಗಿದ್ದಾರೆ. ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಫೇಸ್‍ಬುಕ್ ನಲ್ಲಿ ಬಂದ ಜಾಹೀರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದಾರೆ.

ಲಿಂಕ್ ಕ್ಲಿಕ್ ಮಾಡಿದ ಕ್ಷಣ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿದ್ದಾರೆ. ಹಣ ಇನ್ವೆಸ್ಟ್ ಮಾಡಿ ಡಬಲ್ ಪಡೆಯಿರಿ ಎಂದು ಕರೆ ಬಂದಿದೆ. ಮಹಿಳೆಗೆ ವಂಚಕರು ತಮ್ಮ ಕಂಪನಿಯ ಮೂಲಕ ಹಣ ಹಾಕಿ ಡಬಲ್ ಪಡೆಯಿರಿ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಹಂತ ಹಂತವಾಗಿ ಹಣ ಕಳಿಸಿದ್ದಾರೆ.

ಈ ಮೂಲಕ ಬರೋಬ್ಬರಿ 91 ಲಕ್ಷದ 4315 ಹಣವನ್ನು ವಂಚಕರಿಗೆ ಹಾಕಿ ಮಹಿಳೆ ಕಂಗಾಲಾಗಿದ್ದಾರೆ.

ಡಬಲ್ ಹಣ ಮಾಡುವ ಆಸೆಗೆ ಬಿದ್ದು 91 ಲಕ್ಷ ಹಣ ಕಳೆದುಕೊಂಡ ಮಹಿಳೆ ಇದೀಗ ಹಣ ವಾಪಸ್ ಕೊಡಿಸುವಂತೆ ದೂರು ಸಲ್ಲಿಸಿದ್ದಾರೆ. ವಂಚನೆಯ ಕುರಿತು ಚಿಕ್ಕಮಗಳೂರು ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here