ಸಹಾಯ ನೆಪದಲ್ಲಿ ವಂಚನೆ: ಠಾಣೆ ಮೆಟ್ಟಿಲೇರಿದ ವ್ಯಕ್ತಿಗೆ ಪೊಲೀಸಪ್ಪ ಮಾಡಿದ್ದೇನು!?

0
Spread the love

ತುಮಕೂರು:- ಠಾಣೆ ಮೆಟ್ಟಿಲೇರಿದ ವ್ಯಕ್ತಿ ಓರ್ವರಿಗೆ ಕಾನ್ಸ್ಟೇಬಲ್ ವಂಚಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ಜರುಗಿದೆ.

Advertisement

ಪೊಲೀಸರಿಂದಲೇ ಅನ್ಯಾಯಕ್ಕೊಳಗಾದ ವ್ಯಕ್ತಿಯ ಕುಟುಂಬ ಪೊಲೀಸ್ ಕಾನ್ಸ್​ಟೇಬಲ್​​ ಕಿರುಕುಳಕ್ಕೆ ಬೀದಿಗೆ ಬಂದಿದ್ದಾರೆ. ಸದ್ಯ ತುಮಕೂರು ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿರಾ ಕಾನ್ಸ್​ಟೇಬಲ್ ಕುಮಾರ್ ​ನನ್ನು ಬಂಧಿಸಲಾಗಿದೆ.

ಜಿಲ್ಲೆಯ ಶಿರಾ ಕಾನ್ಸ್​ಟೇಬಲ್​​ ಕುಮಾರ್​​ ಎಂಬುವನಿಂದ ಸತೀಶ್​ಗೆ ವಂಚನೆ ಮಾಡಲಾಗಿದೆ. ಗುಡ್ಡೆನಹಳ್ಳಿ ಸತೀಶ್, ಮಂಡ್ಯ ಅಭಿಷೇಕ್​ ನಡುವೆ 3 ಲಕ್ಷ ರೂಪಾಯಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಅಭಿಷೇಕ್​ಗೆ ಸತೀಶ್ 3 ಲಕ್ಷ ರೂಪಾಯಿ ನೀಡಬೇಕಿದ್ದ. ಹೀಗಾಗಿ ಶಿರಾ ಠಾಣೆಗೆ ಸತೀಶ್ ವಿರುದ್ಧ ಅಭಿಷೇಕ್‌ ದೂರು ನೀಡಿದ್ದ. ಈ ವೇಳೆ ಇಬ್ಬರ ನಡುವೆ ಪಿಸಿ ಕುಮಾರ್‌ ರಾಜಿ ಪಂಚಾಯ್ತಿ ಮಾಡಿದ್ದ.

ಪಿಸಿ ಕುಮಾರ್​ ಸತೀಶ್​ನೊಂದಿಗೆ ಸ್ನೇಹ ಬೆಳಸಿಕೊಂಡಿದ್ದ. ಸತೀಶ್​ಗೆ 3 ಲಕ್ಷ ರೂ ನೀಡಿ ಅಭಿಷೇಕ್​ಗೆ ಹಣ ಕೊಡುವಂತೆ ಸಹಾಯ ಮಾಡಿದ್ದ. ಹಣದ ಶೂರಿಟಿಗೆ ಮನೆ ಅಗ್ರಿಮೆಂಟ್‌ ಬರೆಸಿಕೊಂಡಿದ್ದ. ಆದರೆ ಕುಮಾರ ಅಗ್ರಿಮೆಂಟ್‌ ಬದಲು ತನ್ನ ಹೆಸರಿಗೆ ಮನೆ ರಿಜಿಸ್ಟ್ರೈಷನ್‌ ಮಾಡಿಕೊಂಡಿದ್ದ. ಇತ್ತ ಅಗ್ರಿಮೆಂಟ್‌ ಅಂತ ತಿಳಿದು ರಿಜಿಸ್ಟ್ರೇಷನ್‌ ಪತ್ರಕ್ಕೆ ಸತೀಶ್ ಸಹಿ ಹಾಕಿದ.

ಬಳಿಕ ಸತೀಶ್‌ ಬಳಿ 80 ಸಾವಿರ ಬಡ್ಡಿ ವಸೂಲಿ ಮಾಡಿದ್ದ. ಬಡ್ಡಿ ಕೊಡದಿದ್ದಾಗ ಕುಮಾರ್‌ ಸತೀಶ್ ಕಾರನ್ನು ಕಿತ್ಕೊಂಡಿದ್ದ. ವಾರದ ಹಿಂದೆ ಮನೆಯಿಂದ ಸತೀಶ್ ಕುಟುಂಬವನ್ನ ಹೊರಹಾಕಿದ್ದ. ಹೀಗಾಗಿ ಕುಮಾರ್‌ ದೌರ್ಜನ್ಯವನ್ನು ಸತೀಶ್ ಎಸ್​ಪಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಕುಮಾರ್​ನನ್ನ ಪೊಲೀಸರು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here