ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಭಾವಸಾರ ವಿಜನ್ ಇಂಡಿಯಾ ಆಶ್ರಯದಲ್ಲಿ ಇಲ್ಲಿಯ ಸರಕಾರಿ ಮಾದರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಉಚಿತವಾಗಿ ಮಕ್ಕಳ ರಕ್ತ ಗುಂಪು ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದ ಗುಂಪು ತಿಳಿಯುವುದರಿಂದ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದಾಗ ಅನುಕೂಲವಾಗಲಿದೆ. ಉಚಿತವಾಗಿ ಈ ಶಿಬಿರವನ್ನು ಏರ್ಪಡಿಸಿದ್ದರಿಂದ ಶಾಲೆಯ ಮಕ್ಕಳಿಗೆ ಪ್ರರಯೋಜನಕಾರಿಯಾಗಿದೆ ಎಂದರು.
ಡಾ. ದತ್ತಾತ್ರೆಯ ವೈಕುಂಠೆ ಮಕ್ಕಳ ರಕ್ತವನ್ನು ತಪಾಸಣೆ ಮಾಡಿ, ರಕ್ತದ ಗುಂಪುನ್ನು ನಮೂದಿಸಿ ಅವರಿಗೆ ಕಾರ್ಡ್ ಗಳನ್ನು ವಿತರಿಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಗವಿಶಿದ್ದಪ್ಪ ಯಲಿಶಿರುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ಅನಸಮ್ಮ ಅಂಬಕ್ಕಿ, ಕೆ.ಎಸ್. ಬೆಂತೂರು, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ತಾ.ಪಂ ಮಾಜಿ ಸದಸ್ಯ, ಲಕ್ಕುಂಡಿ ಬಿ.ಜೆ.ಪಿ ಮಂಡಲದ ಅಧ್ಯಕ್ಷ ಮಹೇಶಕುಮಾರ ಮುಸ್ಕಿನಭಾವಿ, ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ದೊಂಗಡೆ, ವಿರೂಪಾಕ್ಷಯ್ಯ ಪತ್ರಿಮಠ, ಗೀತಾ ನೂಕಾಪೂರ, ಅಂಜನಾ ಕರಿಯಲ್ಲಪ್ಪನವರ, ಎಸ್.ಜಿ. ಕುರುವತ್ತೆಗೌಡರ, ಪಿ.ಎನ್. ಶೀರೋಳ ಉಪಸ್ಥಿತರಿದ್ದರು.