ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಹಾತಲಗೇರಿ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸತ್ಸಂಗ ಗದಗ-ಬೆಟಗೇರಿ ಹಾಗೂ ಅಕ್ವಾ ಲೈಫ್ ಸೈನ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ 50 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಎಲುಬಿನ ಸಾಂದ್ರತೆಯ ಉಚಿತ ಪರೀಕ್ಷೆ ಹಾಗೂ ಉಚಿತ ಚಿಕಿತ್ಸಾ ಶಿಬಿರದಲ್ಲಿ 110ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದುಕೊಂಡರು.
ಗದುಗಿನ ಖ್ಯಾತ ಎಲುಬು-ಕೀಲು ತಜ್ಞ ವೈದ್ಯರಾದ ಡಾ. ಸಂಗಮನಾಥ ಶೆಟ್ಟರ, ಡಾ. ಎಸ್.ಡಿ. ಯರಗೇರಿ ನೇತೃತ್ವದಲ್ಲಿ ಅಕ್ವಾ ಲೈಫ್ ಸೈನ್ಸ್‌ನ ತಾಂತ್ರಿಕ ತಜ್ಞರ ತಂಡದಿಂದ ಶಿಬಿರವು ಯಶಸ್ವಿಯಾಗಿ ಜರುಗಿತು.
ಅಗತ್ಯವಿದ್ದವರಿಗೆ ಚಿಕಿತ್ಸೆ ಹಾಗೂ ಔಷಧವನ್ನು ಉಚಿತವಾಗಿ ನೀಡಲಾಯಿತು. ಶಿರಡಿ ಸಾಯಿಬಾಬಾ ಸತ್ಸಂಗದ ಅಧ್ಯಕ್ಷ ಮಹೇಶಗೌಡ ತಲೇಗೌಡ್ರ, ಉಪಾಧ್ಯಕ್ಷ ವಿ.ಆರ್. ಕುಂಬಾರ, ಉಮೇಶ ನಾಲ್ವಾಡ, ಕಾರ್ಯದರ್ಶಿ ಅಮೃತ ವಾಲಿ, ಸಹ ಕಾರ್ಯದರ್ಶಿ ಸಿದ್ದಮಲ್ಲಪ್ಪ ಎಸ್. ಕಾವೇರಿ, ಖಜಾಂಚಿ ದೀಪಕ ಸುಲಾಖೆ, ರಘುವೀರ ಪತ್ತೇಪೂರ, ಸುಶೀಲಾ ಕೋಟಿ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ರಾಮಣ್ಣ ಕಾಶಪ್ಪನವರ, ಸಿದ್ಧಣ್ಣ ಗೌರಿಪೂರ, ರವಿರಾಜ ಕೋಟಿ, ಯಲ್ಲೋಸಾ ಹಬೀಬ, ರವಿಪ್ರಕಾಶ ರೆಡ್ಡಿ, ಶಶಿಕಾಂತ ಅರಳಿ ಮುಂತಾದವರು ಶಿಬಿರದ ಯಶಸ್ವಿಗೆ ಶ್ರಮಿಸಿದರು.


