ಉಚಿತ ನೇತ್ರ ತಪಾಸಣೆ ವರದಾನ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮತಕ್ಷೇತ್ರದಲ್ಲಿ ಬೆಳ್ಳಟ್ಟಿ ಗ್ರಾಮವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಗ್ರಾಮದ ಸುತ್ತಮುತ್ತಲಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿಯ ಜನತೆಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳು ವರದಾನವಾಗಿವೆ ಎಂದು ಬೆಳ್ಳಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ತಿಮ್ಮರಡ್ಡಿ ಮರಡ್ಡಿ ಹೇಳಿದರು.

Advertisement

ಅವರು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಗದಗ, ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮ ಗದಗ, ತಾಲೂಕಾ ವೈದ್ಯಾಧಿಕಾರಿಗಳ ಕಛೇರಿ ಶಿರಹಟ್ಟಿ ಹಾಗೂ ತಿಮ್ಮರಡ್ಡಿ ಪಾ.ಮರಡ್ಡಿ ಸ್ನೇಹ ಬಳಗ, ಪ್ರಜಾಚೈತನ್ಯ ಫೌಂಡೇಶನ್ ಬೆಳ್ಳಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ದಿ. ಹನುಮರಡ್ಡಿ ಸೋಮರಡ್ಡಿ ಮರಡ್ಡಿ ಇವರ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಬಳಗದ ವತಿಯಿಂದ ಕಳೆದ 10 ವರ್ಷಗಳಿಂದ ಬೆಳ್ಳಟಿ ಗ್ರಾಮದಲ್ಲಿ ಇಂತಹ ಉಚಿತ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಈ ವರೆಗೂ ಒಂದು ಸಾವಿರಕ್ಕೂ ಅಧಿಕ ಬಡ ಕುಟುಂಬಗಳ ವಯೋವೃದ್ಧರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಈಗಾಗಲೇ ಹಲವಾರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆ ಅವಶ್ಯವಿದ್ದವರಿಗೆ ಶಸ್ತ್ರಚಿಕಿತ್ಸೆ ಕಲ್ಪಿಸಲಾಗಿದೆ ಎಂದರು.

ಪುಟ್ಟಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ನಾಗರಾಜ ಕುಲಕರ್ಣಿ, ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ, ಮಹೇಶ ಬಡ್ನಿ, ಸುರೇಶ ಬೆಲಹುಣಸಿ, ಹೇಮಂತರಡ್ಡಿ ಅಳವಂಡಿ, ಯಲ್ಲಪ್ಪ ಒಳಗೇರಿ, ಗಿರೀಶರೆಡ್ಡಿ ಮೇಕಳಿ, ವೆಂಕಣ್ಣ ಡಂಬಳ, ವೆಂಕಟೇಶ ಬಸವರಡ್ಡಿ, ವಿಶ್ವನಾಥ ದಲಾಲಿ, ರಾಜೀವ ಮಾಂಡ್ರೆ, ಪರಸರಡ್ಡಿ ಮರಡ್ಡಿ, ಮಂಜುನಾಥ ಮಾಚೇನಹಳ್ಳಿ, ಪರಮೇಶಪ್ಪ ಕೋಡಿಹಳ್ಳಿ, ಯಲ್ಲನಗೌಡ ಪಾಟೀಲ, ಶ್ರೀನಿವಾಸ ಮರಡ್ಡಿ, ಸುರೇಶ ಬೇಂದ್ರೆ, ಅಶೋಕ ಭಾವನೂರ, ಪರಮೇಶಪ್ಪ ಬೂದಿಹಾಳ, ಸುನೀಲ ಬಣಗಾರ, ಚನ್ನವೀರಪ್ಪ ಸಜ್ಜನರ, ರಾಘು ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here