ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಬಳಗಾನೂರ ಚಿಕೇನಕೊಪ್ಪದ ಶ್ರೀ ಚನ್ನವೀರ ಕಲಾ ಹಾಗೂ ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ಶಿಬಿರದಲ್ಲಿ ರೋಗಿಗಳಿಗೆ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಜರುಗಿತು.
ಕಾರ್ಯಕ್ರಮವನ್ನು ಶ್ರೀಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಉದ್ಘಾಟಿಸಿ ಮಾತನಾಡಿ, ಆರೋಗ್ಯ ಶಿಬಿರದ ಮಹತ್ವ ಮತ್ತು ಅದರ ಸದುಪಯೋಗವನ್ನು ಗ್ರಾಮೀಣ ಭಾಗದ ಜನರು ಪಡೆದುಕೊಂಡು ಆರೋಗ್ಯವನ್ನು ಕಾಪಾಡಿಕೊಂಡು ದೇಶದ ಆಸ್ತಿಯಾಗಬೇಕೆಂದು ಹೇಳಿದರು.
ರಾಯಚೂರಿನ ಕಣ್ವ ಹಾಸ್ಪಿಟಲ್‌ನ ಡಾ. ಬಸನಗೌಡ ಪಾಟೀಲ ಔಷಧಿಗಳನ್ನು ಉಚಿತವಾಗಿ ನೀಡಿದರು. ಈ ಶಿಬಿರದಲ್ಲಿ ಡಾ. ಎಸ್.ಬಿ. ಲಕ್ಕೋಳ, ಡಾ. ಎ.ಎಸ್. ಯರಗುಪ್ಪಿ, ಸಿ.ವಿ. ಮುದುಗಲ್, ಡಾ. ಮಧು ರಡ್ಡೇರ, ಡಾ. ಲಕ್ಷ್ಮಣ ಬಾಕಳೆ, ಡಾ. ರವೀಂದ್ರ ಕಳಕೊಣ್ಣವರ, ಡಾ. ತ್ರಯಂಬಕೇಶ್ವರ ಲಕ್ಕೋಳ, ಪ್ರಕಾಶ ಬರದೂರ, ಎಂ.ಜಿ. ಹಿರೇಮಠ, ಎಸ್.ಎಸ್. ಪುರಾಣಕಮಠ, ಆರ್.ವಿ. ಪಾಟೀಲ, ಆರ್.ಪಿ. ಹಿರೇಮಠ, ಡಾ. ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.