ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಪಕ್ಷದ ಸೇವಾ ಪಾಕ್ಷಿಕ ಅಭಿಯಾನದಡಿ ಉಚಿತ ಆರೋಗ್ಯ ಶಿಬಿರವು ಬೆಳದಡಿ ಗ್ರಾಮದಲ್ಲಿ ಜರುಗಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕರಾದ ಪಿ.ರಾಜೀವ್ ಹಾಗೂ ಶಿರಹಟ್ಟಿ ಶಾಸಕ ಡಾ. ಚಂದ್ರ ಲಮಾಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಸುಭಾಷ ಸುಂಕದ, ಮಂಜುನಾಥ ಹಳ್ಳೂರಮಠ, ಪ್ರಮುಖರಾದ ಭದ್ರೇಶ ಕುಸ್ಲಾಪೂರ, ಬಿ.ಎಸ್. ಚಿಂಚಲಿ, ನಾಗರಾಜ ಮದ್ನೂರ, ಮಹೇಶ್ ಕಮ್ಮಾರ, ಎಫ್.ಎಸ್. ಪಾಟೀಲ, ಮಹಾದೇವಪ್ಪ ಹಡಪದ, ವೆಂಕಟೇಶ ಸೂರಣಗಿ, ರಾಮಣ್ಣ ಬಡಿಗೇರ, ವಿಠಲ ತೋಟದ, ಶಿವಾನಂದ ಇನಾಮತಿ, ಶಂಕರಗೌಡ್ರ ಪಾಟೀಲ, ಶರಣಪ್ಪ ಹೊಸಮನಿ, ದೇವೇಂದ್ರ ತೋಟದ, ಶಿವಪ್ಪ ತೋಟದ, ಮೊತಿಲಾಲ್ ಲಮಾಣಿ, ಸಂತೋಷ ಅಕ್ಕಿ, ಅರವಿಂದ ಅಣ್ಣಿಗೇರಿ, ಗೋಪಾಲನಾಯಕ, ನಾಗೇಶ ತೋಟದ, ರಾಮನಗೌಡ ಪಾಟೀಲ, ದಶರಥಪ್ಪ ಭಜಂತ್ರಿ, ವಿರೇಶ ಕಲ್ಮಠ ಮುಂತಾದವರು ಉಪಸ್ಥಿತರಿದ್ದರು.



