ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಲಯನ್ಸ್ ಕ್ಲಬ್, ಲಯನ್ಸ್ ಲೇಡೀಸ್ ಕ್ಲಬ್, ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಸುವರ್ಣ ಮಹೋತ್ಸವದ ಅಂಗವಾಗಿ ಚೇಂಬರ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಡಾ. ತುಕಾರಾಮ ಸೋರಿ, ಡಾ. ವೀರೇಶ ವ್ಹಿ.ಡಿ, ಡಾ. ಪ್ರವೀಣ ಸಜ್ಜನರ, ಡಾ. ಜಗದೀಶ ಶಿರೋಳ, ಡಾ. ಜಿ.ಜಿ. ಬಿಡಿನಹಾಳ, ಡಾ. ಶ್ರೀಧರ ಕುರಡಗಿ, ಡಾ. ಭೀಮಸಿಂಗ್, ಡಾ. ನವೀನ ಹಿರೇಗೌಡ್ರ, ಡಾ. ಶಿಲ್ಪಾ ಧಡೂತಿ, ಡಾ. ತೇಜಸ್ವಿನಿ ಹಿರೇಮಠ, ಡಾ. ಸುನೀತಾ ಕುರಡಗಿ, ಡಾ. ಈರಣ್ಣ ಹಳೇಮನಿ ಉಚಿತ ಆರೋಗ್ಯ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಚೇಂಬರ್ ಅಧ್ಯಕ್ಷ ತಾತನಗೌಡ ಪಾಟೀಲ, ಉತ್ಸವ ಸಮಿತಿ ಚೇರಮನ್ ಆನಂದ ಪೋತ್ನೀಸ್, ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ, ಕೋಶಾಧ್ಯಕ್ಷ ರೇಣುಕಪ್ರಸಾದ ಹಿರೇಮಠ, ಲಯನ್ ಲೇಡೀಸ್ ಕ್ಲಬ್ ಅಧ್ಯಕ್ಷೆ ಪೂಜಾ ಪಾಟೀಲ, ಕಾರ್ಯದರ್ಶಿ ಸುರೇಖಾ ಮಲ್ಲಾಡದ, ಕೋಶಾಧ್ಯಕ್ಷೆ ಸಹನಾ ಹಿರೇಮಠ, ಅಶ್ವಥ್ ಸುಲಾಖೆ, ಜೆ.ಡಿ. ಉತ್ತರಕರ, ರಮೇಶ ಶಿಗ್ಲಿ, ಪ್ರವೀಣ ವಾರಕರ, ಎಸ್.ಕೆ. ಶೆಟ್ಟರ, ನಿತೀಶ್ ಸಾಲಿ, ಅರವಿಂದ ಪಟೇಲ್, ರಘು ಮೇಹರವಾಡೆ, ಎಸ್.ಡಿ. ಪಾಟೀಲ, ಮಂಜುನಾಥ ವೀರಲಿಂಗಯ್ಯನಮಠ, ರಾಹುಲ್ ಅರಳಿ, ರತನ್ ದೇಸಾಯಿ, ವೀರೇಶ ಪಟ್ಟಣಶೆಟ್ಟಿ, ವೀಣಾ ಸುಲಾಖೆ, ಸಾವಿತ್ರಿ ಶಿಗ್ಲಿ, ಮಧು ವೀರಲಿಂಗಯ್ಯನಮಠ, ಅಪರ್ಣಾ ತೋಟದ, ಅಮೃತಾ ವಾರಕರ, ರೂಪಾ ಉತ್ತರಕರ, ಅಶ್ವಿನಿ ನೀಲಗುಂದ ಮುಂತಾದವರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.
ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಅಗತ್ಯ ಮಾರ್ಗದರ್ಶನ ನೀಡಿದರು. ಔಷಧ ವ್ಯಾಪಾರಸ್ಥರು ಉಚಿತ ಔಷಧ ಪೂರೈಸಿದರು.