ಉಚಿತ ಆರೋಗ್ಯ ತಪಾಸಣಾ ಶಿಬಿರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಸೌಖ್ಯದಾ ಆಸ್ಪತ್ರೆ ಮತ್ತು ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ನಗರದ ಸೌಖ್ಯದಾ ಆಸ್ಪತ್ರೆಯಲ್ಲಿ ಎ.7ರಿಂದ 9ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಫಿಸಿಷಿಯನ್ ಮತ್ತು ಮಧುಮೇಹ ತಜ್ಞರಾದ ಡಾ. ಮಹಮ್ಮದ್ ನಿಜಾಮುದ್ದೀನ್ ಅತ್ತಾರ್ ತಪಾಸಣೆ ಮಾಡುವರು.

Advertisement

ಶಿಬಿರದಲ್ಲಿ ವೈದ್ಯರೊಂದಿಗೆ ಉಚಿತ ಸಮಾಲೋಚನ, ದೇಹದ ತೂಕ ಪ್ರಮಾಣ, ಬ್ಲಡ್ ಪ್ರೆಶರ್, ಇಸಿಜಿ, 2ಡಿ ಎಕೋ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಲಾಗುತ್ತದೆ. ಶಿಬಿರದಲ್ಲಿ ನೊಂದಾಯಿಸಿದವರಿಗೆ ಮೊದಲನೆಯ ದಿನ 2ಡಿ ಎಕೋ ಉಚಿತವಾಗಿ ಮಾಡಲಾಗುವುದು. ವೈದ್ಯರ ಸಲಹೆ ಮೇರೆಗೆ ಆಯ್ದ ಪರೀಕ್ಷೆಗಳಲ್ಲಿ ಶೇ 50ರಷ್ಟು ರಿಯಾಯಿತಿಯಲ್ಲಿ ಕೊಲೆಸ್ಟ್ರಾಲ್ ಪರೀಕ್ಷೆ, ಲಿವರ್ ಪರೀಕ್ಷೆ, ಕಿಡ್ನಿ ಪರೀಕ್ಷೆ, ರಕ್ತ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ, ಮೂತ್ರ ಪರೀಕ್ಷೆ, ಟ್ರೋಪೊನಿನ್ ಟಿ, ಚೆಸ್ಟ್ ಎಕ್ಸ್ರೇ ನೀಡಲಾಗುತ್ತದೆ.

ಶಿಬಿರಕ್ಕೆ ಹಳೆಯ ವರದಿ, ವೈದ್ಯರ ಪತ್ರ ಹಾಗೂ ಔಷಧಿ ಚೀಟಿಗಳು ತೆಗೆದುಕೊಂಡು ಬರಬೇಕು. ಹೆಚ್ಚಿನ ಮಾಹಿತಿಗಾಗಿ-917829029139, 08372295959/58 ಸಂಪರ್ಕಿಸಬೇಕು ಎಂದು ಆಸ್ಪತ್ರೆಯ ಅಧಿಕಾರಿ ಶಿವಾನಂದ ಮುಳಗುಂದ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here