ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ವತಿಯಿಂದ ಬೆಟಗೇರಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಸೆ. 28ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಟಗೇರಿಯ ಶ್ರೀ ಹಳೇ ಬನಶಂಕರಿ ದೇವಿ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ.
ಈ ಶಿಬಿರದಲ್ಲಿ ಎಲುಬು-ಕಿಲು ತಜ್ಞರಾದ ಡಾ. ಪ್ರಕಾಶ ಸಂಕನೂರ, ಜನರಲ್ ಮೆಡಿಸಿನ್ ಡಾ. ಸಂದೀಪ ಕವಳಿಕಾಯಿ, ಜನರಲ್ ಸರ್ಜನ್ ಡಾ. ಆದಿತ್ಯ ಗೋಡಕಿಂಡಿ, ನೇತ್ರ ತಜ್ಞರಾದ ಡಾ. ವಿಜಯ ಸಜ್ಜನರ, ಪ್ರಸೂತಿ ತಜ್ಞರಾದ ಡಾ. ಚೈತ್ರಾ ಜಿತೇಂದರ, ಮೂಗು ಗಂಟಲು ತಜ್ಞರಾದ ಡಾ. ಚಂದ್ರಶೇಖರ ಬಳ್ಳಾರಿ, ಚಿಕ್ಕಮಕ್ಕಳ ತಜ್ಞರಾದ ಡಾ. ಜಿತೇಂದ್ರ ಲಿಂಗಾರೆಡ್ಡಿ, ದಂತ ತಜ್ಞರಾದ ಡಾ. ಕುಶಾಲ್ ಅಳ್ಳೊಳ್ಳಿ, ಚರ್ಮ ರೋಗ ತಜ್ಞರಾದ ಡಾ. ತುಕಾರಾಮ್ ಸೂರಿ, ಅರ್ತವಲಿಕೆ ತಜ್ಞರಾದ ಡಾ. ಶ್ವೇತಾ ಸಂಕನೂರ ಹಾಗೂ ಔಷಧಿ ವಿತರಣಾ ಸಂಚಾಲಕರಾದ ರಾಮನಗೌಡ ದಾನಪ್ಪಗೌಡ್ರ ಉಪಸ್ಥಿತರಿರುವರು.
ಬೆಟಗೇರಿಯ ಎಲ್ಲ ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಪ್ರಧಾನ ಕಾರ್ಯದರ್ಶಿ ಶಂಕರ ಕಾಕಿ, ಸುರೇಶ ಚಿತ್ತರಗಿ, ಕಾರ್ಯಕ್ರಮದ ಸಂಚಾಲಕ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಶಶಿಧರ ದಿಂಡೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.