HomeGadag Newsಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ

ಜನ್ಮದಿನದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಗುರುವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾಭವನದಲ್ಲಿ ಬೆಳ್ಳಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ತಿಮ್ಮರಡ್ಡಿ ಮರಡ್ಡಿ ಹುಟ್ಟುಹಬ್ಬದ ನಿಮಿತ್ತ ಅವರ ಸ್ನೇಹ ಬಳಗ, ಸುಚಿರಾಯಿ ಆಸ್ಪತ್ರೆ ಹುಬ್ಬಳ್ಳಿ ಮತ್ತು ಡಾ. ಮಹೇಶ ನಾಲವಾಡ ಪ್ರತಿಷ್ಠಾನ ಹುಬ್ಬಳ್ಳಿ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಜರುಗಿತು.

ಈ ಸಂದರ್ಭದಲ್ಲಿ ತಿಮ್ಮರಡ್ಡಿ ಮರಡ್ಡಿ ಮಾತನಾಡಿ, ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಜನತೆಯ ಆರೋಗ್ಯದ ದೃಷ್ಟಿಯಿಂದ ಹುಟ್ಟುಹಬ್ಬದ ನಿಮಿತ್ತ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಬಳಗದ ವತಿಯಿಂದ ಆಯೋಜಿಸಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಜನರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಫಿಜಿಶಿಯನ್, ಹೃದಯರೋಗ, ಸ್ತ್ರೀರೋಗ ತಜ್ಞರು, ಚಿಕ್ಕಮಕ್ಕಳ ತಜ್ಞರು, ಎಲುಬು-ಕೀಲುಗಳ ತಜ್ಞರು, ಚರ್ಮರೋಗ ತಜ್ಞರನ್ನು ಕರೆಯಿಸಿ ಜನತೆಯ ಆರೋಗ್ಯವನ್ನು ತಪಾಸಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಬಳಗದ ವತಿಯಿಂದ ಉಚಿತ ನೇತ್ರದಾನ ಶಿಬಿರ, ರಕ್ತದಾನ ಶಿಬಿರ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮುಂದೆಯೂ ಕೂಡ ಇಂತಹ ಸಮಾಜಮುಖಿ ಕೆಲಸಗಳು ಮುಂದುವರೆಯಲಿವೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಸ್ವಾಮೀಜಿ ವಹಿಸಿದ್ದರು. ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಸುನೀಲ ಮಹಾಂತಶೆಟ್ಟರ, ಬಿ.ಡಿ. ಪಲ್ಲೇದ, ಕುಮಾರಸ್ವಾಮಿ ಹಿರೇಮಠ, ಮದನಲಾಲ್ ಬಾಫಣಾ, ಶಂಕರ ಮರಾಠೆ, ಮೋಹನ ಗುತ್ತೆಮ್ಮನವರ, ಮಹೇಶ ಬಡ್ನಿ, ಕೊಟ್ರೇಶ ಸಜ್ಜನರ, ಮಲ್ಲಯ್ಯ ಶೀಲವಂತಮಠ, ದಿಲ್‌ಶಾದಬಿ ಚೌರಿ, ಶ್ರಾವಣಿ ಮಾಂಡ್ರೆ, ಸುರೇಶ ಬೆಲಹುಣಸಿ, ಕರಿಯಪ್ಪ ಮಹದೇವಪ್ಪನವರ, ಅಶೋಕ ಕಂಪ್ಲಿ, ಉದಯಕುಮಾರ ತೋಟರ, ಗಿರೀಶರಡ್ಡಿ ಮೇಕಳಿ, ರಬಬಾನಿ ಚೌರಿ, ಬಸವರಡ್ಡಿ ಗೋವಣ್ಣನವರ, ಪರಶುರಾಮ ಗೋಪಾಳಿ, ಮಲ್ಲಿಕಾರ್ಜುನ ಶ್ಯಾಗೋಟಿ, ರಾಜೀವ್ ಮಾಂಡ್ರೆ, ಶ್ರೀನಿವಾಸಗೌಡ ಪಾಟೀಲ, ರಾಘವೇಂದ್ರ ಬಡಿಗೇರ, ಜಗದೀಶ ಸಾಸಲವಾಡ, ಆನಂದ ಸತ್ಯಮ್ಮನವರ, ಗೌತಮ ಹಳ್ಳೆಮ್ಮನವರ, ರಾಘು ಗುತ್ತೆಮ್ಮನವರ, ಫಕ್ಕೀರಡ್ಡಿ ಸಿಡಗನಾಳ, ಫಕ್ಕೀರಡ್ಡಿ ಬಸವರಡ್ಡಿ, ಕೃಷ್ಣಾ ದುರಗದ, ಶ್ರೀನಿವಾಸ ಬಸವರಡ್ಡಿ, ವಿನಾಯಕ ಅಳವಂಡಿ ಮುಂತಾದವರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!