ಶಾಲಾ-ಕಾಲೇಜು ಬಾಲಕರಿಗೆ ಉಚಿತ ಕಬಡ್ಡಿ ತರಬೇತಿ

0
kabaddi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಶಹರ ಮಟ್ಟದ ಶಾಲಾ-ಕಾಲೇಜು ಬಾಲಕರಿಗೆ ಗದಗ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ವತಿಯಿಂದ ಉಚಿತ ಕಬಡ್ಡಿ ತರಬೇತಿ ನೀಡಲಾಗುತ್ತಿದ್ದು, ಪ್ರತಿ ದಿವಸ ಸಾಯಂಕಾಲ 5ರಿಂದ 7 ಗಂಟೆಯವರೆಗೆ ಕಳಸಾಪೂರ ರಸ್ತೆಯ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ನೀಡಲಾಗುವುದು.

Advertisement

ಬಾಲಕರ ವಯಸ್ಸು 17ರಿಂದ 20 ವರ್ಷದೊಳಗೆ ಇರಬೇಕು. ಏ. 29ರಂದು ಮುಂಜಾನೆ 9 ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕಬಡ್ಡಿ ತರಬೇತಿಯನ್ನು ಮ್ಯಾಟ್ ಮೇಲೆ ನೀಡಲಾಗುವುದು. ಆದ್ದರಿಂದ, ಕ್ರೀಡಾಪಟುಗಳು ಮ್ಯಾಟ್ ಶೂ ಧರಿಸಿರಬೇಕು.

ಗದಗ-ಬೆಟಗೇರಿ ಅವಳಿ ನಗರದ ಕ್ರೀಡಾಪಟುಗಳಿಗೆ ಮಾತ್ರ ತರಬೇತಿ ಇರುತ್ತದೆ. ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. 15 ಜನ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎಸ್.ಆರ್. ಗಣಾಚಾರಿ-9900875239, 7975934661, 7353410312 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here