ಬೆಂಗಳೂರು:- ನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಲು ಕಾರು ಅಥವಾ ಬೈಕ್‌ನಲ್ಲಿ ಸುಮಾರು 2–3 ಗಂಟೆ ಸಮಯ ಬೇಕಾಗುತ್ತದೆ.
ಆದರೆ ಮೆಟ್ರೋ ಮೂಲಕ ಪ್ರಯಾಣಿಸಿದರೆ 30–40 ನಿಮಿಷದಲ್ಲಿ ತಲುಪಬಹುದು. ಈ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು, ಐಟಿ–ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಉಚಿತ ಮೆಟ್ರೋ ಪಾಸ್ ನೀಡಲು ನಿರ್ಧಾರವಾಗಿದೆ. ಪ್ರಾಯೋಗಿಕವಾಗಿ, ಕೆಲವು ಕಂಪನಿಗಳ 250 ಉದ್ಯೋಗಿಗಳಿಗೆ CSR ಫಂಡ್ನಿಂದ ಆರ್ಬಿಟ್ ವಾಲೆಟ್ ಕಾರ್ಡ್ ಮೂಲಕ ಪ್ರತಿ ತಿಂಗಳಿಗೆ 1,500 ರೂಪಾಯಿಗಳ ಪಾಸ್ ವಿತರಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಐಟಿ ನೌಕರರು ಕೆಲಸಕ್ಕೆ ಸಂಚರಿಸುತ್ತಿದ್ದಾರೆ. ಹೆಚ್ಚಿನವರು ಸ್ವಂತ ಕಾರು, ಬೈಕ್ ಅಥವಾ ಕಂಪನಿ ಕ್ಯಾಬ್‌ನಲ್ಲಿ ಬರುತ್ತಿರುವ ಕಾರಣ, ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಟ್ರಾಫಿಕ್ ತುಂಬಾ ಹೆಚ್ಚಾಗಿದೆ.
ಇನ್ನು ಮುಂದಿನ ದಿನಗಳಲ್ಲಿ ಈ ಭಾಗದ ದೊಡ್ಡ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೆಟ್ರೋ ಪಾಸ್ ನೀಡಲಿದ್ದು, ಇದರಿಂದ ಉದ್ಯೋಗಿಗಳು ಸಮಯಕ್ಕೆ ಕಚೇರಿಗೆ ತಲುಪಲಿದ್ದಾರೆ ಮತ್ತು ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ ಎಂದು ಐಟಿ ಬಿಟಿ ಅಸೋಸಿಯೇಷನ್ ವಕ್ತಾರ ಮಯೂರ್ ತಿಳಿಸಿದ್ದಾರೆ.


