ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾಮಿ ವಿವೇಕಾನಂದರ 162ನೇ ಜಯಂತಿಯ ಅಂಗವಾಗಿ ಎಲ್.ಆಯ್. ದಿಂಡೂರ ಆಂಗ್ಲ ಮಾಧ್ಯಮ ಶಾಲೆ ರೋಣ, ಜೈ ನರೇಂದ್ರ ಯುವ ಜನ ಹಿತ ಸಂಸ್ಥೆ, ಯುವ ಮಾರ್ಗ ಉಚಿತ ಸೈನಿಕ ತರಬೇತಿ ಕೇಂದ್ರ ಬಾಗಲಕೋಟೆ ಮತ್ತು ಮಾಜಿ ಸೈನಿಕರ ಪ್ರಕೋಷ್ಠಗಳ ಸಂಯೋಗದಲ್ಲಿ ಅಗ್ನಿವೀರ ಮತ್ತು ಆರ್ಮಿ ಸೈನಿಕ ತರಬೇತಿ ನಡೆಯಲಿದ್ದು, ಸೈನ್ಯ ಸೇರಬಯಸುವ ಗದಗ ಜಿಲ್ಲೆಯ ಯುವಕರಿಗೆ ಜ.27ರಿಂದ 30 ದಿನಗಳ ಉಚಿತ ಸೈನಿಕ ತರಬೇತಿ ಶಿಬಿರ ರೋಣ ನಗರದಲ್ಲಿ ನಡೆಯಲಿದೆ.
ಯುವ ಮಾರ್ಗ ಸೈನಿಕ ತರಬೇತಿ ಕೇಂದ್ರದಿಂದ ಕೊಪ್ಪಳದಲ್ಲಿ ನಡೆದ ಶಿಬಿರದಲ್ಲಿ ಪಾಲ್ಗೊಂಡ 84 ವಿದ್ಯಾರ್ಥಿಗಳಲ್ಲಿ 72 ವಿದ್ಯಾರ್ಥಿಗಳು ನೇಮಕವಾಗಿದ್ದಾರೆ. ಪ್ರಸ್ತುತ ಮಂಗಳೂರು ಎಆರ್‌ಒ ವಿಭಾಗದ ನೇಮಕಾತಿಯು ಮಾರ್ಚ್ನಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗುವಂತೆ ಈ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಶಿಬಿರಕ್ಕೆ ಅಭ್ಯರ್ಥಿಗಳನ್ನು ಡೆಮೋ ರ‍್ಯಾಲಿ ಮೂಲಕ ಆಯ್ಕೆ ಮಾಡಲಾಗುವದು. ಆಯ್ಕೆ ಪ್ರಕ್ರಿಯೆಯು ಜ.26ರಂದು ರೋಣ ನಗರದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗದಗ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಯುವ ಮಾರ್ಗ ಉಚಿತ ಸೈನಿಕ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಕೆ.ರಾಘವೇಂದ್ರ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಎಂ.ಎಸ್. ಕರಿಗೌಡ್ರ, ಪ್ರಕೋಷ್ಠಗಳ ಸಂಯೋಜಕ ಶಶಿಧರ್ ಎಲ್.ದಿಂಡೂರ, ಮಂಜುನಾಥ ಶಾಂತಗೇರಿ ವಿನಂತಿಸಿದ್ದಾರೆ.
ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಪಾಲ್ಗೊಳಲು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಭಾವಚಿತ್ರಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ತರಬೇತುದಾರರಾದ-ಕೆ.ರಾಘವೇಂದ್ರ ಜಿ(9606816822), ಕುಮಾರ ಅಸೂಟಿ (9632643513) ಮತ್ತು ಹನುಮಂತ (7026653472) ಇವರನ್ನು ಸಂಪರ್ಕಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜ.25ರ ಸಂಜೆ 4 ಅಂತಿಮ ಸಮಯವಾಗಿರುತ್ತದೆ.