ಮುಜರಾಯಿ ಇಲಾಖೆಗಳಿಂದ ದೇಗುಲ, ಮಠಗಳನ್ನ ಮುಕ್ತಗೊಳಿಸಿ: ಮಂತ್ರಾಲಯ ಶ್ರೀಗಳು

0
Spread the love

ರಾಯಚೂರು: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಸಾದವಾಗಿ ನೀಡುವ ಲಡ್ಡಿನಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಲಾಗಿದೆ ಎನ್ನುವ ವಿಚಾರ ಸಾಬೀತಾಗುತ್ತಿದ್ದಂತೆಮಠಮಾನ್ಯಗಳು, ದೇವಾಲಯಗಳು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಬೇಕು ಎಂದು ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಒತ್ತಾಯಿಸಿದ್ದಾರೆ. ರಾಯಚೂರಿನಲ್ಲಿ ರಾಷ್ಟ್ರಧರ್ಮ ಪಾಲನಾ ಸಮಿತಿ ರಚನೆ ವಿಚಾರವಾಗಿ ಮಾತನಾಡಿದ ಮಂತ್ರಾಲಯ ಶ್ರೀಗಳು,

Advertisement

ಸ್ವಾತಂತ್ರ್ಯ ಪೂರ್ವದಲ್ಲಿ ಆಯಾ ದೇವಸ್ಥಾನ, ಮಠಗಳ ಆಯಾ ಶಿಷ್ಯರು, ಭಕ್ತರ, ಸಮುದಾಯ ಮುಖಂಡರ ನೇತೃತ್ವದಲ್ಲಿ ನಿರ್ವಹಣೆ, ಕಾರ್ಯಚಟುವಟಿಕೆ ನಡೆಯುತ್ತಿತ್ತು. ಈಗ ಲೌಕಿಕ ಕಾನೂನುಗಳಿಂದ ಇದೆಲ್ಲಾ ಸರ್ಕಾರದ ವಶದಲ್ಲಿ ಹೋಗಿದೆ. ಸರ್ಕಾರದ ರಾಜಕೀಯ ಹಿನ್ನೆಲೆಯಲ್ಲಿ ತಿರುಪತಿ ಲಡ್ಡುವಿನ ಪ್ರಕರಣದಂತ ತೊಂದರೆಗಳು ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

 

 


Spread the love

LEAVE A REPLY

Please enter your comment!
Please enter your name here