ವಿಜಯಸಾಕ್ಷಿ ಸುದ್ದಿ, ಮುಳಗುಂದ : ನಿತ್ಯವೂ ಯೋಗ ಮಾಡಿದರೆ ರೋಗದಿಂದ ಸಂಪೂರ್ಣ ದೂರವಾಗಿ ನಿರೋಗಿಗಳಾಗಲು ಸಾಧ್ಯ ಎಂದು ಶೋಭಾ ಗುಗ್ಗರಿ ಹೇಳಿದರು.
ಅವರು ಪಟ್ಟಣದ ಬಿ.ಸಿ. ಬಂಗಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಯೋಗದಲ್ಲಿ ಎಲ್ಲಾ ರೋಗಗಳಿಗೆ ಕಡಿವಾಣ ಹಾಕುವ ಶಕ್ತಿ ಅಡಗಿದ್ದು, ಪ್ರತಿಯೊಬ್ಬರೂ ನಿತ್ಯ ಯೋಗ ಮಾಡಿ ನಿರೋಗಿಗಳಾಗಿ ಎಂದರು.
ಪ.ಪಂ ಸದಸ್ಯ ಎಸ್.ಸಿ. ಬಡ್ನಿ, ರತ್ನಮ್ಮ ಬಡಗಣ್ಣವರ, ಸುಧಾ ಚಳ್ಳಮರದ, ರತ್ನಾ ಕಲ್ಲೂರ, ದ್ರಾಕ್ಷಾಯಣಿ ಸಂಬರಗಿ, ಗೀತಾ ಜಾಧಾವ, ಮಧು ಕುರ್ತಕೋಟಿ, ಈಶ್ವರಿ ವಿಶ್ವವಿದ್ಯಾಲಯದ ಶಿವಾನಿ, ಯೋಗ ಶಿಕ್ಷಕ ಪ್ರಕಾಶ ಮದ್ದಿನ ಇದ್ದರು.



