ಬೆಂಗಳೂರು:- ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಬ್ ಒಂದರಲ್ಲಿ ಕಿರಿಕ್ ನಡೆದಿದ್ದು, ಪಬ್‌ಗೆ ಬಂದಿದ್ದ ಸ್ನೇಹಿತರ ಮೇಲೆ ಬೌನ್ಸರ್ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ನೇಹಿತರು ಬೆಂಗಳೂರಿಗೆ ಟ್ರಿಪ್ ಗೆ ಬಂದಿದ್ದರು. ಹಾಗೆ ಅಶೋಕನಗರದ ಆರ್ಬರ್ ಬ್ರೀವಿಂಗ್ ಪಬ್ ಗೆ ಹೋಗಿದ್ದ ಅವರು, ತಡರಾತ್ರಿವರೆಗೂ ಎಣ್ಣೆ ಕುಡಿದಿದ್ದರು. ಕುಡಿದ ಅಮಲಿನಲ್ಲಿ ಬೌನ್ಸರ್ ಗಳ ಜೊತೆ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದಾರೆ.
ಸುಮಾರು 6-8 ಜನ ಬೌನ್ಸರ್ ಗಳಿಂದ ರಾಡ್ ಹಾಗೂ ಹೆಲ್ಮೇಟ್ ನಿಂದ ಹಲ್ಲೆ ನಡೆದಿದೆ. ಗಲಾಟೆ ಆಗುವಾಗಲೇ ಆಶೋಕನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹಲ್ಲೆ ವೇಳೆ ತಲೆಯಲ್ಲಿ ರಕ್ತ ಸೋರಿದ್ದು ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ಸೇರಿದ್ದಾರೆ. ಸದ್ಯ ಹಲ್ಲೆಯ ವಿಡಿಯೋ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ.
ದೂರಿನ ಬಳಿಕ ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.