ಯಶ್ ಅಭಿನಯದ ಟಾಕ್ಸಿಕ್ ಟೀಸರ್ ರಿಲೀಸ್ ಆಗುತ್ತಿದ್ದಂತೆಯೇ ಮಿಲಿಯನ್ ವೀಕ್ಷಣೆ ದಾಟಿ ದೂಳೆಬ್ಬಿಸಿದೆ. 4 ವರ್ಷಗಳ ಬಳಿಕ ತೆರೆಗೆ ಮರಳಿದ ಯಶ್ ಹೊಸ ಅವತಾರದಲ್ಲಿ ಮಿಂಚಿದ್ದಾರೆ.
ಟೀಸರ್ ಹಿಟ್ ಆಗುತ್ತಿದ್ದಂತೆಯೇ ಯಶ್ ಅವರ ಹಳೆಯ ಕಾಲೇಜು ವಿಡಿಯೋ ಮತ್ತೆ ಟ್ರೆಂಡ್ ಆಗುತ್ತಿದೆ. ಮೈಸೂರಿನ ಮಹಾರಾಜ ಕಾಲೇಜು ವೇದಿಕೆಯಲ್ಲಿ ಕುಣಿದಿದ್ದ ಸ್ಟೆಪ್‌ನ್ನು ಯಶ್ ಈಗ ‘ಟಾಕ್ಸಿಕ್’ ಟೀಸರ್‌ನಲ್ಲೂ ಬಳಸಿರುವುದು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಟೀಸರ್ ಕೊನೆಯಲ್ಲಿ ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡ ಯಶ್ ತಮ್ಮದೇ ಸ್ಟೈಲ್‌ನಲ್ಲಿ ಡಾನ್ಸ್ ಮಾಡುವ ದೃಶ್ಯ ವಿಶೇಷ ಗಮನ ಸೆಳೆದಿದೆ. ಇದು ಕಥೆಯೊಂದಿಗಿನ ಸಂಕೇತವೇ ಎಂಬ ಕುತೂಹಲ ಹೆಚ್ಚಾಗಿದೆ.
ಅಪ್ಪ–ಮಗನ ಶೇಡ್ ತೋರಿಸುವ ಈ ಟೀಸರ್‌ನಲ್ಲಿ “ಡ್ಯಾಡಿ ಆ್ಯಮ್ ಹೋಮ್” ಡೈಲಾಗ್ ಹೊಸ ಟ್ವಿಸ್ಟ್ ನೀಡಿದೆ. ಒಟ್ಟಿನಲ್ಲಿ ‘ಟಾಕ್ಸಿಕ್’ ಈಗ ಇಂಟರ್ನೆಟ್ ಲೋಕವನ್ನೇ ಆವರಿಸಿಕೊಂಡಿದೆ.



