ಹಾಸನ: ವರ್ಷಕ್ಕೊಮ್ಮೆ ಭಕ್ತರಿಗಾಗಿ ತೆರೆಯಲ್ಪಡುವ ಹಾಸನಾಂಬೆ ದೇಗುಲದ ಬಾಗಿಲು ನಿನ್ನೆ ಅಂದರೆ ಅಕ್ಟೋಬರ್ 9ರಂದು ತೆರೆದಿದೆ. ಇನ್ನು 23 ರವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದು.ಈ 14 ದಿನಗಳ ಕಾಲ ಭಕ್ತರಿಗೆ ದರ್ಶನದ ಭಾಗ್ಯ ಲಭಿಸುತ್ತದೆ. ಇನ್ನೂ ಇದರ ನಡುವೆ ಮುಂಬರುವ ದಿನಗಳಲ್ಲಿ ಹಾಸನಂಬೆ ಸಾನಿಧ್ಯವೇ ಇರುವುದಿಲ್ಲ ಎಂದು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.
ಇಂದು ಹಾಸನದಲ್ಲಿ ಹಾಸನಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ‘ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ’ ಎಂದು ಹೇಳಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಮುಂದಿನ ದಿನಗಳಲ್ಲಿ ಅವಕಾಶಗಳು ಅಡಚಣೆಯಾಗುವ ಸಾಧ್ಯತೆಯಿದೆ. 2025 ರಿಂದ 2032ರ ಅವಧಿಯಲ್ಲಿ ಸಿದ್ದೇಶ್ವರನ ಕೃಪೆಯಿಂದ ‘‘ಘಟಪ್ರಭ ಪರಿವರ್ತನೆ’’ ಆಗಲಿದೆ. ಈ ಸಮಯದಲ್ಲಿ ಏಳು ಜನ ಅಕ್ಕ-ತಂಗಿಯರು ಸೇರಲಿದ್ದಾರೆ. ಈ ಕೊನೆಯ ಅವಧಿಯಲ್ಲಿ ದರ್ಶನ ಪಡೆದವರು ಸಂತೋಷ ಪಡುತ್ತಾರೆ ಎಂದು ಹೇಳಿದ್ದಾರೆ.
ಇನ್ನೂ ರಾಜಕೀಯದವರು ಇನ್ಮೇಲೆ ಹಿಟ್ಲರ್ ರೂಲ್ ತರಲಿದ್ದಾರೆ. ಸಿದ್ದರಾಮಯ್ಯ ಅವರು ಆರೋಗ್ಯ ಕ್ಷೀಣಿಸದಂತೆ ನೋಡಿಕೊಳ್ಳಬೇಕು. ಅಲ್ಲದೇ ಕಾಂಗ್ರೆಸ್ ಅಧಿಕಾರ ಅವಧಿ ಇದೇ ಕೊನೆ, ಮುಂದೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ. ಜನರು ಆರೋಗ್ಯ ನೋಡಿಕೊಳ್ಳಬೇಕು. ಜಲಗಂಡಾಂತರ ಸಂಭವಿಸಲಿದ್ದು, ಘಟಪ್ರಭ, ಮಲಪ್ರಭಾ, ಗೋದಾವರಿ ನದಿಗಳು ದೇಶ ಎರಡು ಭಾಗ ಮಾಡುವಷ್ಟು ತುಂಬುತ್ತೆ ಎಂದು ಹೇಳಿದರು.