ಇನ್ಮುಂದೆ ತಾಲೂಕು ಪಂಚಾಯಿತಿಗಳ ಮೂಲಕ ಗೃಹಲಕ್ಷ್ಮಿ ಹಣ ಪಾವತಿ.? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು..?

0
Spread the love

ಬೆಂಗಳೂರು: ಕಳೆದ 3 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದ್ ಆಗಿದೆ. 2,000 ರೂಪಾಯಿ ಹಣ ಬಾರದೆ ಇರೋ ಕಾರಣ ನಾರಿಯರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. 3 ತಿಂಗಳಿಂದ ಬ್ಯಾಂಕ್​ಗೆ ಅಲೆದರೂ ಹಣ ಮಾತ್ರ ಜಮೆಯಾಗಿಲ್ಲ. ಮನೆ ಬಾಡಿಗೆ, ಆಸ್ಪತ್ರೆ‌, ಇತರೆ ಖರ್ಚಿಗಾಗಿ ಬಳಕೆಯಾಗ್ತಿದ್ದ ಹಣ ಈಗ ಬಾರದಿದ್ದಕ್ಕೆ ಮಹಿಳೆಯರು ಕಂಗಾಲಾಗಿದ್ದಾರೆ. ಹೀಗಾಗಿ ರಾಜ್ಯದ ಮಹಿಳೆಯರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

Advertisement

ಇದರ ಬೆನ್ನಲ್ಲೇ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಣ ಹಾಕುವ ಭರವಸೆ ನೀಡಿದ್ದಾರೆ. ಹೌದು ನಗರದಲ್ಲಿ ಮಾತನಾಡಿದ ಅವರು, ನಾನು ಆಸ್ಪತ್ರೆಯಲ್ಲಿರುವ ಕಾರಣ ಮೂರು ತಿಂಗಳು ವಿಳಂಬವಾಗಿದೆ. ನಾನಿದ್ದಾಗ ಫೈನಾನ್ಸ್ ಇಲಾಖೆಗೆ ನಾನು ಒತ್ತಡ ಹಾಕುತ್ತಿದ್ದೆ. ಜೊತೆಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತಿದ್ದೆ.

ದುರ್ದೈವ ಅಪಘಾತ ಬಳಿಕ ನಲವತ್ತು ದಿನ ಆಸ್ಪತ್ರೆಯಲ್ಲಿದ್ದ ಕಾರಣ ತಡವಾಗಿದೆ, ಇಷ್ಟು ದಿನ ಇಲಾಖೆಯಿಂದ ಹಣ ಬಿಡುಗಡೆ ಮಾಡ್ತಿದ್ದೇವು. ಈಗ ಬೆಂಗಳೂರು ಸುತ್ತಮುತ್ತಲಿನ ನಾಲ್ಕು ತಾಲೂಕು ಪಂಚಾಯತಿಗೆ ದುಡ್ಡು ಹಾಕಿ, ಅಲ್ಲಿಂದ ಸಿಡಿಪಿಒ ಮುಖಾಂತರ ಸೇಮ್ ಚಾನಲ್ ಹಣ ಬಿಡುಗಡೆ ಮಾಡಲು ಹೆಚ್ಚು ಕಮ್ಮಿ ಆಗಿದೆ . ಇನ್ನೊಂದು ವಾರ ಹತ್ತು ದಿನದಲ್ಲಿ ಖಾತೆಗಳಿಗೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಹಣವನ್ನು ತಾಲೂಕು ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡುತ್ತೇವೆ. ಇನ್ನೊಂದು ವಾರ ಹತ್ತು ದಿನದಲ್ಲಿ ದುಡ್ಡು ಬರುತ್ತೆ. ಎರಡು ತಿಂಗಳ ಹಣ ಫೈನಾನ್ಸ್ ದವರು ಟ್ರಸರಿಗೆ ಹಾಕಿದ್ದಾರೆ ಎನ್ನುವ ಮಾಹಿತಿ ಇದೆ. ನಾನು ಕೂಡ ಬಜೆಟ್ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮೂರು ತಿಂಗಳ ದುಡ್ಡನ್ನ ಹಾಕಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಹೊಸ ಪ್ಯಾಟರ್ನ್ ಮಾಡಿದ್ದರಿಂದಲೂ ಹಣ ಬರಲು ವಿಳಂಬವಾಗಿದೆ. ಆದ್ರೆ ಹೊಸ ಪ್ಯಾಟರ್ನ್ ದಿಂದ ಯಾವುದೇ ಗೊಂದಲ ಇಲ್ಲ. ಡೈರೆಕ್ಟ್ ಅವರ ಅಕೌಂಟ್ ಗೆ ಹಣ ಹಾಕುತ್ತೇವೆ. ಎಲ್ಲಾ ಗೃಹಲಕ್ಷ್ಮಿಯರಿಗೆ ನಿಮ್ಮ ಹಣ ಬರುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here