ಆಟೋ ಚಾಲಕರೇ ಇಲ್ಲಿ ಕೇಳ್ರಪ್ಪ: ಇನ್ಮುಂದೆ ಮಚ್ಚು, ಲಾಂಗು ಪೋಸ್ಟರ್ ಹಾಕಿದ್ರೆ ಬೀಳುತ್ತೆ ದಂಡ!

0
Spread the love

ಬೆಂಗಳೂರು:- ಆಟೋ ಅಂದಮೇಲೆ ಸಾಮಾನ್ಯವಾಗಿ ಮಾಸ್ ಡೈಲಾಗ್ ಗಳ ಬರಹಗಳುಳ್ಳ ಪೋಸ್ಟರ್ ಗಳನ್ನು ನೋಡಿರುತ್ತೇವೆ. ಆದ್ರೆ ಇನ್ಮುಂದೆ ಸ್ವಲ್ಪ ಹುಷಾರಾಗಿರಿ, ಏಕೆಂದರೆ ವಾಹನಗಳ ಮೇಲೆ ಮಚ್ಚು ಹಿಡಿದ ಪೋಸ್ಟರ್ ಗಳು, ಹಾಗೂ ಅಶ್ಲೀಲ ಪೋಸ್ಟರ್ ಹಾಕಿದ್ರೆ ದಂಡ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.

Advertisement

ಹೌದು, ವಾಹನಗಳ ಮೇಲೆ ವಿವಾದಾತ್ಮಕ, ಕ್ರೌರ್ಯ, ಅಶ್ಲೀಲ ಪೋಸ್ಟರ್ ಹಾಕಿದರೆ ಇನ್ನು ಮುಂದೆ ದಂಡ ಬೀಳಲಿದೆ. ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದು, ದಂಡದ ಜೊತೆ ಸೀಜ್ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ. ವಾಹನಗಳ ಮೇಲೆ ನೆಚ್ಚಿನ ನಟರ ಫೋಟೋ ಹಾಕಿ, ಯಾವುದೋ ವಿವಾದಾತ್ಮಕ ಫೋಟೋ ಅಥವಾ ಬರಹಗಳನ್ನು ಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸಾರಿಗೆ ಇಲಾಖೆಯ ಅಧಿಕಾರಿಗಳು ಸಮರ ಸಾರಲು ಮುಂದಾಗಿದ್ದಾರೆ.

ನಟರು ಮಚ್ಚು ಹಿಡಿಯುವ ಪೋಸ್ಟರ್ ಅಥವಾ ಕೆಲವರ ಭಾವನೆಗಳನ್ನು ಕೆರಳಿಸುವ ಬರಹಗಳು, ಫೋಟೋಗಳನ್ನು ಹಾಕಿದರೆ ಅಧಿಕಾರಿಗಳು ದಂಡಾಸ್ತ್ರ ಪ್ರಯೋಗ ಮಾಡಲಿದ್ದಾರೆ. ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳ ತಂಡ ಇಂತಹ ವಾಹನಗಳ ಪರಿಶೀಲನೆಗೆ ಇಳಿಯಲಿದೆ. ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಕರು, ತಮ್ಮ ವಾಹನಗಳ ಮೇಲೆ ಯಾವುದಾದರೂ ಹಳೆಯ ಕೇಸುಗಳಿದ್ದರೆ ಅಂತ ವಾಹನಗಳನ್ನ ಅಧಿಕಾರಿಗಳು ಸೀಜ್ ಮಾಡಲಿದ್ದಾರೆ.

ಅಶ್ಲೀಲ, ಅಸಭ್ಯ ಹಾಗೂ ಕ್ರೌರ್ಯವನ್ನು ಬಿಂಬಿಸುವ ಬರಹಗಳು, ಕೆಲವು ಪೋಸ್ಟರ್‌ಗಳನ್ನ ಆಟೋ, ಟ್ಯಾಕ್ಸಿಗಳ ಮೇಲೆ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ. ಇದು ನಕಾರಾತ್ಮಕ ಪರಿಣಾಮ ಬೀಳುತ್ತಿದ್ದು, ಸಾರಿಗೆ ನಿಯಮಗಳನ್ನ ಉಲ್ಲಂಘಿಸಿ ಇಂತಹ ಪೋಸ್ಟರ್‌ಗಳನ್ನು ಹಾಕುವುದನ್ನು ನಿಲ್ಲಿಸಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here