ಇನ್ಮುಂದೆ ಸುಳ್ಳು ಸುದ್ದಿ ಹರಡಿದ್ರೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ, 10 ಲಕ್ಷ ದಂಡ..!

0
Spread the love

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ್ರೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ, 10 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸುವ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.

Advertisement

ಜೂನ್ 19, 2025ರ ಕ್ಯಾಬಿನೆಟ್ ಸಭೆಯಲ್ಲಿ ಈ ಮಸೂದೆಯನ್ನು ಚರ್ಚಿಸಲಾಗಿದ್ದು, ಈ ಮಸೂದೆಯು ಸಾರ್ವಜನಿಕ ಭದ್ರತೆ, ಸಾಮಾಜಿಕ ಸಾಮರಸ್ಯ, ಮತ್ತು ಮುಕ್ತ-ನ್ಯಾಯಸಮ್ಮತ ಚುನಾವಣೆಗೆ ಧಕ್ಕೆ ತರುವ ಪೋಸ್ಟ್ ಗಳಿಗೂ ಶಿಕ್ಷೆಯನ್ನು ಒಳಗೊಂಡಿದೆ.

ಮುಂದಿನ ಸಭೆಯಲ್ಲಿ ಇದನ್ನು ಮಂಡಿಸಲು ತೀರ್ಮಾನಿಸಲಾಗಿದೆ. ಸುಳ್ಳು ಸುದ್ದಿಯನ್ನು ನಿಯಂತ್ರಿಸಲು ಆರು ಜನರ ಸಮಿತಿಯನ್ನು ಒಳಗೊಂಡ ಸಾಮಾಜಿಕ ಜಾಲತಾಣ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸುವ ಯೋಜನೆಯಿದೆ.

ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಮತ್ತು ಪ್ರಸಾರ ಸಚಿವರು ಈ ಪ್ರಾಧಿಕಾರದ ಅಧ್ಯಕ್ಷರಾಗಿರುವರು, ಜೊತೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ತಲಾ ಒಬ್ಬ ಸದಸ್ಯ, ಸಾಮಾಜಿಕ ಜಾಲತಾಣದ ಇಬ್ಬರು ಪ್ರತಿನಿಧಿಗಳು, ಮತ್ತು ಒಬ್ಬ ಐಎಎಸ್ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಿಸುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಈ ಕಾನೂನಿನಡಿ, ಮಹಿಳೆಯರಿಗೆ ಅವಮಾನಕರವಾದ, ಸನಾತನ ಧರ್ಮದ ಸಂಕೇತಗಳಿಗೆ ಅಗೌರವ ತೋರುವ, ಅಥವಾ ಮೂಢನಂಬಿಕೆಯನ್ನು ಉತ್ತೇಜಿಸುವ ವಿಷಯಗಳನ್ನು ನಿಷೇಧಿಸಲಾಗಿದೆ. ವಿಜ್ಞಾನ, ಇತಿಹಾಸ, ಧರ್ಮ, ತತ್ವಶಾಸ್ತ್ರ, ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಅಧಿಕೃತ ಸಂಶೋಧನೆ ಆಧಾರಿತವಾಗಿರಬೇಕು ಎಂದು ಮಸೂದೆಯು ಒತ್ತಾಯಿಸುತ್ತದೆ.


Spread the love

LEAVE A REPLY

Please enter your comment!
Please enter your name here