HomeSports Newsಇಂದಿನಿಂದ ಮಹಿಳಾ ಟಿ20 ಲೀಗ್ ಆರಂಭ: RCB ಮೊದಲ ಎದುರಾಳಿ ಯಾರು?

ಇಂದಿನಿಂದ ಮಹಿಳಾ ಟಿ20 ಲೀಗ್ ಆರಂಭ: RCB ಮೊದಲ ಎದುರಾಳಿ ಯಾರು?

For Dai;y Updates Join Our whatsapp Group

Spread the love

ಮಹಿಳಾ ಪ್ರೀಮಿಯರ್ ಲೀಗ್‌ ಇಂದಿನಿಂದ ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್ಸಿಬಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಗುಜರಾತ್‌ನ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ.

ಇಂದಿನಿಂದ ಮಾ.15ರ ವರೆಗೆ ಡಬ್ಲ್ಯುಪಿಎಲ್ ಸಾಗಲಿದ್ದು, ಫೈನಲ್ ಸೇರಿ ಒಟ್ಟಾರೆ 22 ಪಂದ್ಯಗಳು ನಡೆಯಲಿವೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ ಬೆಂಗಳೂರು, ಯುಪಿ ವಾರಿಯರ್ ಹೀಗೆ 5 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಮಾ.13ಕ್ಕೆ ಮುಂಬಯಿಯಲ್ಲಿ ಎಲಿಮಿನೇಟರ್, ಮಾ.15ಕ್ಕೆ ಅಲ್ಲೇ ಫೈನಲ್ ಪಂದ್ಯ ನಡೆಯಲಿದೆ.

WPL-2025ರಲ್ಲಿ ಒಟ್ಟು 5 ತಂಡಗಳು ಭಾಗವಹಿಸುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಯುಪಿ ವಾರಿಯರ್ಸ್ ತಂಡಗಳು. ಪ್ರತಿ ತಂಡವು ಇತರ 4 ತಂಡಗಳ ವಿರುದ್ಧ ಎರಡು ಬಾರಿ ಆಡಲಿವೆ. ಗುಂಪು ಹಂತದಲ್ಲಿ ನಂಬರ್-1 ಆಗಿ ಹೊರಹೊಮ್ಮಿದ ತಂಡ ನೇರವಾಗಿ ಫೈನಲ್‌ಗೆ ಹೋಗುತ್ತದೆ. ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯ ಆಡುತ್ತವೆ. ಇಲ್ಲಿ ಗೆದ್ದವರು ಫೈನಲ್ ಪ್ರವೇಶ ಮಾಡುತ್ತವೆ.

ಪಂದ್ಯ ನಡೆಯುವ ಸಮಯ, ಸ್ಥಳ:-

ಇಂದು ಎಷ್ಟು ಗಂಟೆಗೆ ಪಂದ್ಯ..? : ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ.
ಎಲ್ಲಿ ಪಂದ್ಯ ವೀಕ್ಷಣೆ..?: ಸ್ಟಾರ್ ಸ್ಪೋರ್ಟ್ಸ್​ ನೆಟ್​​ವರ್ಕ್​ ಹಾಗೂ Disney + Hotstar.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!