ನಾಳೆಯಿಂದ ಶರಣ ಚರಿತಾಮೃತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಒಕ್ಕಲಗೇರಿ ಓಣಿ ಶ್ರೀ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಜುಲೈ 25ರಿಂದ ಆಗಸ್ಟ್ 28ರವರೆಗೆ ಶರಣ ಚರಿತಾಮೃತ ಪ್ರವಚನವನ್ನು ಏರ್ಪಡಿಸಲಾಗಿದೆ.

Advertisement

ಗದುಗಿನ ಆಧ್ಯಾತ್ಮ ವಿದ್ಯಾಶ್ರಮದ ಪೂಜ್ಯ ಶ್ರೀ ಶಿವಶರಣೆ ಡಾ. ನೀಲಮ್ಮತಾಯಿಯವರು ಪ್ರತಿದಿನ ಸಾಯಂಕಾಲ 7 ಗಂಟೆಯಿAದ 8.30ರವರೆಗೆ ಪ್ರವಚನ ನೀಡಲಿದ್ದು, ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಟ್ರಸ್ಟ್ ಕಮಿಟಿಯ ಚೇರಮನ್ ಎಸ್.ಎ. ಮೊರಬದ ವಕೀಲರು, ಪುರಾಣ ಸಮಿತಿಯ ಅಧ್ಯಕ್ಷ ಶೇಖಪ್ಪ ಹೊಂಬಳ, ಸತ್ಸಂಗದ ಪ್ರಮುಖರಾದ ಸುನಂದಾ ಜೋಬಾಳೆ ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here