ವ್ಯಾಪಾರದಿಂದ ತಂತ್ರಜ್ಞಾನದ ವರೆಗೆ, ಭಾರತ-ಜಪಾನ್ ಏಷ್ಯನ್ ಶತಮಾನವನ್ನು ಮುನ್ನಡೆಸಲಿವೆ: PM ಮೋದಿ

0
Spread the love

ಜಪಾನ್: ವ್ಯಾಪಾರದಿಂದ ತಂತ್ರಜ್ಞಾನದ ವರೆಗೆ, ಭಾರತ-ಜಪಾನ್ ಏಷ್ಯನ್ ಶತಮಾನವನ್ನು ಮುನ್ನಡೆಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ. ಜಪಾನ್ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅವರು, ಜಪಾನ್ ತಂತ್ರಜ್ಞಾನದಲ್ಲಿ ಶಕ್ತಿ ಕೇಂದ್ರವಾಗಿದ್ದರೆ, ಭಾರತ ಪ್ರತಿಭೆಯ ಶಕ್ತಿ ಕೇಂದ್ರವಾಗಿದೆ.

Advertisement

ತಂತ್ರಜ್ಞಾನ ಮತ್ತು ಪ್ರತಿಭೆ ಮಾತ್ರ ಅಭಿವೃದ್ಧಿಗೆ ಕಾರಣವಾಗಬಹುದು. ಭಾರತ ಮತ್ತು ಜಪಾನ್ ನಡುವೆ ಸಹಕಾರದ ಅಪಾರ ಸಾಧ್ಯತೆಗಳಿವೆ. ವ್ಯಾಪಾರ ಜಗತ್ತಿನ ದೈತ್ಯರೊಂದಿಗೆ ಪ್ರಾರಂಭವಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ಮೆಟ್ರೋದಿಂದ ಉತ್ಪಾದನೆಯ ವರೆಗೆ, ಸೆಮಿಕಂಡಕ್ಟರ್‌ನಿಂದ ಸ್ಟಾರ್ಟ್‌ಅಪ್‌ಗಳ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ನಮ್ಮ ಪಾಲುದಾರಿಕೆ ಪರಸ್ಪರ ನಂಬಿಕೆಯ ಸಂಕೇತವಾಗಿದೆ. ಜಪಾನಿನ ಕಂಪನಿಗಳು ಭಾರತದಲ್ಲಿ 40 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ. ಕಳೆದ 2 ವರ್ಷಗಳಲ್ಲಿ ಮಾತ್ರ 30 ಶತಕೋಟಿ ಡಾಲರ್‌ಗಳ ಖಾಸಗಿ ಹೂಡಿಕೆ ನಡೆದಿದೆ ಎಂದು ವಿವರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here