ಪ್ರಮುಖ ಬೇಡಿಕೆಗಳನ್ನು ಈಡೇರಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನಿರ್ದೇಶನದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಗದಗ-ಬೆಟಗೇರಿ ನಗರಸಭೆಯ ಪೌರ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದರು.

Advertisement

ರಾಜ್ಯ ಸರ್ಕಾರ ಪೌರ ವೃಂದದ ನೌಕರರ ಪ್ರಮುಖ ಬೇಡಿಕೆಗಳಾದ ಪೌರ ನೌಕರರನ್ನು ಸರ್ಕಾರಿ ನೌಕರರಂದು ಘೋಷಿಸುವುದು, ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡುವುದು, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋರ‍್ಸ್, ಘನತಾಜ್ಯ ವಾಹನ ಚಾಲಕರು, ಕ್ಲೀರ್ಸ್, ಸೂಪರವೈಸರ್, ನೀರು ಸರಬರಾಜು ಸಿಬ್ಬಂದಿಗಳು, ಕಂಪ್ಯೂಟರ ಆಪರೇಟರ್, ಜೂನಿಯರ್ ಪ್ರೋಗ್ರಾಮರ್ ಇನ್ನಿತರೆ ಸಿಬ್ಬಂದಿಗಳಿಗೆ ನೇರಪಾವತಿ ವೇತನ ಮಾಡುವುದು, ಖಾಯಂ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಈ ಮುಷ್ಕರದಲ್ಲಿ ಶಾಖಾ ಅಧ್ಯಕ್ಷರಾದ ಚಂದ್ರಶೇಖರ ಹಾದಿಮನಿ, ಉಪಾಧ್ಯಕ್ಷ ಪಂಚಾಕ್ಷರಿ ಬಿ. ದೊಡ್ಡಮನಿ, ಆಂಜನೇಯ ಎನ್.ಬಳ್ಳಾರಿ, ಆಂಜನೇಯ ಪೂಜಾರ, ನಾಗೇಶ ಗೂರಣ್ಣವರ, ಪರಶುರಾಮ ಎಫ್. ಶೇರಖಾನೆ, ಜಿಲ್ಲಾ ನಿರ್ದೇಶಕರಾದ ಕೆಂಚಪ್ಪ ಎಫ್.ಪೂಜಾರ, ಸಣ್ಣಪ್ಪ ಎನ್.ಬೋಳಮ್ಮನವರ, ಎಮ್.ಎಮ್. ಮಕಾನದಾರ, ಪ್ರಮುಖರಾದ ಹೇಮೇಶ ಯಟ್ಟಿ, ನಾಗರಾಜ ಬಳ್ಳಾರಿ, ವಿಠ್ಠಲ ಪರಾಪೂರ, ಅರವಿಂದ ಕುರ್ತಕೋಟಿ, ಶೇಖಪ್ಪ ತಮ್ಮಣ್ಣವರ, ಶಿವು ಜಂಬಲದಿನ್ನಿ, ಕೆಂಚಪ್ಪ ಪೂಜಾರ, ಸಣ್ಣಪ್ಪ ಬೋಳಮ್ಮನವರ, ಹನಮಂತ ಡಿ, ಮಲ್ಲಿಕ ಸಂಗಾಪೂರ, ಮುತ್ತು ಯಲ್ಲಾಕ್ಕನವರ, ಸಣ್ಣರಾಮಪ್ಪ ಬಳ್ಳಾರಿ, ನಾರಾಯಣ ಬಳ್ಳಾರಿ, ಆಂಜನಯ್ಯ ಪೂಜಾರ, ಮಂಜು ನರಗುಂದ, ಮುತ್ತು ಚಲವಾದಿ, ಮಂಜು ಚಲವಾದಿ, ಶಿವಲಿಂಗಪ್ಪ ಸೋಂಪೂರ, ಮಂಜು ಯಲ್ಲಪಲ್ಲೆ, ಸಂಗವ್ವ ಸೋಂಪೂರ ಸೇರಿದಂತೆ ಗದಗ-ಬೆಟಗೇರಿ ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕರು, ನೌಕರರು ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ, ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮತ್ತು ಗದಗ ತಹಸೀಲ್ದಾರರು, ಯೋಜನಾ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಬೇಡಿಕೆಗಳನ್ನು ಶೀಘ್ರವೇ ಬಗೆಹರಿಸುವುದಾಗಿ ಭರವಸೆ ನೀಡಿದರಲ್ಲದೆ, ಗದಗ-ಬೆಟಗೇರಿ ನಗರಸಭೆ ಆಯುಕ್ತರು, ಲಕ್ಷ್ಮೇಶ್ವರ, ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ, ಮುಳಗುಂದ ಮುಖ್ಯಾಧಿಕಾರಿಗಳು ಭೇಟಿ ನೀಡಿ ಮುಷ್ಕರ ಕುಳಿತ ನೌಕರರ ಬೇಡಿಕೆಗಳನ್ನು ಆಲಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here