HomeEntertainment25 ದಿನ ಪೂರೈಸಿದ ‘ಫುಲ್ ಮೀಲ್ಸ್’: ಫ್ಯಾಮಿಲಿ ಪ್ರೇಕ್ಷಕರ ಮನಮುಟ್ಟಿದ ಚಿತ್ರ

25 ದಿನ ಪೂರೈಸಿದ ‘ಫುಲ್ ಮೀಲ್ಸ್’: ಫ್ಯಾಮಿಲಿ ಪ್ರೇಕ್ಷಕರ ಮನಮುಟ್ಟಿದ ಚಿತ್ರ

For Dai;y Updates Join Our whatsapp Group

Spread the love

ಸಧ್ಯದ ಬದಲಾದ ಕಾಲಘಟ್ಟದಲ್ಲಿ ಸಿನಿಮಾವೊಂದು ಯಶಸ್ವಿಯಾಗಿ 25 ದಿನಗಳನ್ನು ಪೂರೈಸುವುದೇ ಕನಸಿನ ಮಾತಾಗುತ್ತಿದೆ. ಇಂತಹ ವಾತಾವರಣದಲ್ಲಿ ಚಿತ್ರವೊಂದು ಯಶಸ್ವಿಯಾಗಿ 25 ದಿನಗಳ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದೆ.

ವೆಡ್ಡಿಂಗ್ ಫೋಟೋಗ್ರಾಫರ್ ನೊಬ್ಬ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮ ಕಥಾಹಂದರವನ್ನು ‘ಫುಲ್ ಮೀಲ್ಸ್’ ಚಿತ್ರವು ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಇದೀಗ ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ನಾಲ್ಕನೆಯ ವಾರಕ್ಕೆ ಕಾಲಿಟ್ಟಿದೆ..

ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸಿರುವ , ಎನ್ ವಿನಾಯಕ ನಿರ್ದೇಶಿಸಿರುವ ‘ಫುಲ್ ಮೀಲ್ಸ್’ ಚಿತ್ರಕ್ಕೆ ಪ್ರೇಕ್ಷಕರಿಂದ ಫುಲ್ ಮಾರ್ಕ್ ಸಿಕ್ಕಿದ್ದು, ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಅವರುಗಳ ಅಭಿನಯ ಗಮನ ಸೆಳೆಯುವಂತಿದೆ.

ಅಲ್ಲೊಂದು ಮದುವೆ ಫಿಕ್ಸ್ ಆಗಿದೆ, ಪ್ರೀ-ವೆಡ್ಡಿಂಗ್ ಫೋಟೋಶೂಟ್ ನಡೆಯುತ್ತಿದೆ. ಈ ನಡುವೆ ಮದುಮಗಳಿಗೆ ಫೋಟೋಗ್ರಾಫರ್ ಮೇಲೆಯೇ ಆಕರ್ಷಣೆ ಮೂಡುತ್ತದೆ. ಮುಂದೆ ಏನಾಗುತ್ತದೆ?’ ಎಂಬ ಕುತೂಹಲಕಾರಿ ಒನ್-ಲೈನ್‌ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ‘ಫುಲ್ ಮೀಲ್ಸ್’ ಚಿತ್ರವು, ಹಾಸ್ಯಭರಿತ ತ್ರಿಕೋನ ಪ್ರೇಮಕಥೆಯಾಗಿದೆ. ಎಲ್ಲ ವಯೋಮಾನದವರಿಗೆ ಸೂಕ್ತವಾದ ಈ ಫ್ಯಾಮಿಲಿ ಎಂಟರ್ಟೈನರ್, ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್‌ನ ಜೀವನ ಪಯಣ, ಕನಸುಗಳು ಮತ್ತು ಕುಟುಂಬದ ಮೌಲ್ಯಗಳನ್ನು ಸಹಜವಾಗಿ ತೆರೆದಿಡುವ ಎಂಗೇಜಿಂಗ್ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ.

ಈ ಹಿಂದೆ ‘ಸಂಕಷ್ಟಕರ ಗಣಪತಿ’, ‘ಅಬ್ಬಬ್ಬ’, ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಲಿಖಿತ್ ಶೆಟ್ಟಿ ಅವರು ತಮ್ಮ ನಟನೆ, ಆ್ಯಕ್ಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದು ಚಿತ್ರರಂಗದ ಭರವಸೆಯ ನಟನಾಗಿ ಮೊತ್ತಮ್ಮೆ ಗಮನ ಸೆಳೆದಿದ್ದಾರೆ.

ಇನ್ನು ಈ ಚಿತ್ರವನ್ನು ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ರವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಅವರು ಯಶಸ್ಸು ಕಂಡಿದ್ದಾರೆ. ಅವರ ಕೆಲಸಕ್ಕೆ ಚಿತ್ರರಂಗದಲ್ಲಿ ಉತ್ತಮ ಪ್ರಶಂಸೆ ಸಿಕ್ಕಿದೆ. ಪ್ರೇಕ್ಷಕರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ಅವರು ಭರವಸೆಯ ಯುವ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘು, ಸೂರಜ್‌ ಲೋಕ್ರೆ, ವಿಜಯ್‌ ಚಂಡೂರ್‌, ರವಿಶಂಕರ್‌ ಗೌಡ, ರಾಜೇಶ್‌ ನಟರಂಗ, ಸುಜಯ್‌ ಶಾಸ್ತ್ರಿ, ಚಂದ್ರಕಲಾ ಮೋಹನ್‌, ಹೊನ್ನವಳ್ಳಿ ಕೃಷ್ಣ, ರಮೇಶ್‌ ಪಂಡಿತ್‌, ಚೇತನ್‌ ದುರ್ಗ, ನಾಗೇಂದ್ರ ಅರಸ್‌, ಮೂಗು ಸುರೇಶ್‌, ಗಣೇಶ್ ರಾವ್, ಕೋಟೆ ಪ್ರಭಾಕರ್‌ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಗುರುಕಿರಣ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!