ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಇಲ್ಲಿನ ದೇವರ ದಾಸಿಮಯ್ಯನವರ ಪುತ್ಥಳಿಯ ಬಳಿ 33ನೇ ವಚನ ವಾಚನ ಕಾರ್ಯಕ್ರಮ ಸೀಗೆ ಹುಣ್ಣಿಮೆಯಂದು ಸಾರ್ಥಕವಾಗಿ ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ವಚನ ಪಿತಾಮಹ ದೇವರ ದಾಸಿಮಯ್ಯನವರ ಪುತ್ಥಳಿಗೆ ನಾರಾಯಣ ಕಂಗೂರಿ ಪೂಜೆ ಸಲ್ಲಿಸಿದರು.
ನಿವೃತ್ತ ವಿಷಯ ಪರಿವೀಕ್ಷಕರಾದ ಹಾಗೂ ಸಾಹಿತಿಗಳಾದ ರಾಮಚಂದ್ರ ಹುಬ್ಬಳ್ಳಿ ಅವರು ವಚನ ವಾಚನ ಕಾರ್ಯಕ್ರಮವನ್ನು ನಿಭಾಯಿಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ, ನಗರಸಭೆಯ ಮಾಜಿ ಉಪಾಧ್ಯಕ್ಷ ಅಶೋಕ್ ಬಣ್ಣದ ಮುಂತಾದವರು ಮಾತನಾಡಿ, ವಚನ ಸಾಹಿತ್ಯದ ಮೌಲ್ಯಗಳು ಇಂದಿನ ಸಮಾಜಕ್ಕೂ ಬೆಳಕು ನೀಡುತ್ತಿವೆ ಎಂದು ಅಭಿಪ್ರಾಯಪಟ್ಟರು.
ಅನುಷಾ ಮುದಗಲ್ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಗದಗ ಜಿಲ್ಲಾ ದೇವಾಂಗ ಸಂಘದ ಜಿಲ್ಲಾಧ್ಯಕ್ಷ ದಶರಥರಾಜ ಕೊಳ್ಳಿ ಅವರು ಸ್ವಾಗತ ಭಾಷಣ ಮಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಶ್ರೀನಿವಾಸ ಹುಬ್ಬಳ್ಳಿ ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭ ಶಂಕರ್ ಖಾಕಿ, ಸಂಕಣ್ಣ ಹಾದಿಮನಿ, ಅನಿಲ್ ಗಡ್ಡಿ, ಸರೋಜಾ ಮುದಗಲ್ ಮುಂತಾದವರು ಉಪಸ್ಥಿತರಿದ್ದರು.