ವಿಜಯವಾಡ:– ಚಲಿಸುತ್ತಿದ್ದ ಬೈಕ್ ನಲ್ಲೇ ಜೋಡಿಹಕ್ಕಿಗಳು ರೊಮ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಆಂಧ್ರ ಪ್ರದೇಶದ ವಿಜಯವಾಡ ನ್ಯಾಷನಲ್ ಹೈ ವೇ – 16 ರಾಮಲಿಂಗೇಶ್ವರ ನಗರ ಫ್ಲೈ ಓವರ್ ನಲ್ಲಿ ಈ ಘಟನೆ ನಡೆದಿದೆ.
Advertisement
@jallakai2024 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವತಿಯೂ ಬೈಕ್ ಮುಂಭಾಗದಲ್ಲಿ ತನ್ನ ಗೆಳೆಯನನ್ನು ಅಪ್ಪಿಕೊಂಡು ಕುಳಿತಿದ್ದಾಳೆ. ಆದರೆ ಇತ್ತ ಯುವಕನು ಬೈಕ್ ಓಡಿಸುತ್ತ ತನ್ನ ಪ್ರೇಮಿಯ ಜೊತೆಗೆ ರೊಮ್ಯಾನ್ಸ್ ಮಾಡುತ್ತಿದ್ದಾನೆ. ಚಲಿಸುತ್ತಿದ್ದ ಬೈಕ್ ನಲ್ಲೇ ಮೈ ಮರೆತು ಪ್ರೇಮಿಗಳಿಬ್ಬರೂ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಸಾರ್ವಜನಿಕ ಸ್ಥಳ ಗಳಲ್ಲಿ ಈ ರೀತಿ ವರ್ತಿಸುವ ಪ್ರೇಮಿಗಳ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.