ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ವಾರದಿಂದ ಹಮ್ಮಿಕೊಂಡ `ಫನ್ ವೀಕ್’ ಕಾರ್ಯಕ್ರಮದ ಕೊನೆಯ ದಿನದಂದು ಪ್ರಶಿಕ್ಷಣಾರ್ಥಿಗಳೆಲ್ಲರೂ ಸಾಂಪ್ರದಾಯಿಕ ವಿವಾಹದ ಉಡುಗೆಯನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಪ್ರಾಚಾರ್ಯ ಡಾ. ಗಂಗೂಬಾಯಿ ಪವಾರ, ಸಮಿತಿಯ ಅಂಗ ಸಂಸ್ಥೆಗಳಾದ ಜೆ.ಎನ್. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಎಲ್. ಚವಾಣ್ ಹಾಗೂ ಉಪನ್ಯಾಸಕರು, ವಿ.ಡಿ.ಎಸ್. ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಸ್. ರಾಠೋಡ ಹಾಗೂ ಉಪನ್ಯಾಸಕರು, ವಿ.ಡಿ.ಎಸ್. ಬಾಲಕರ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಕಿಶೋರಬಾಬು ನಾಗರಕಟ್ಟಿ, ವಿ.ಡಿ.ಎಸ್. ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್.ಆರ್. ಜಾಲಿಹಾಳ ಹಾಗೂ ಶಿಕ್ಷಕರು, ವಿ.ಡಿ.ಎಸ್. ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ವಿ. ಹವಾಲ್ದಾರ ಹಾಗೂ ಸಿಬ್ಬಂದಿ ವರ್ಗದವರು, ವಿ.ಡಿ.ಎಸ್ ಕ್ಲಾಸಿಕ್ ಶಾಲೆಯ ಪ್ರಾಚಾರ್ಯರಾದ ಎಂ.ಆರ್. ಡೊಳ್ಳಿನ, ಶಕುಂತಲಾ ಪಾಟೀಲ ನರ್ಸಿಂಗ್ ಕಾಲೇಜಿನ ಚೇರಮನ್ ಡಿ.ಬಿ. ಪಾಟೀಲ, ಸ್ಪರ್ಶ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ರಂಗನಾಥ ಎಂ.ವಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.