ವಿಜಯಸಾಕ್ಷಿ ಸುದ್ದಿ, ಗದಗ: ಜಿ.ಪಿ.ಎಲ್ 3ನೇ ಆವೃತ್ತಿಯ ಫೈನಲ್ ಪಂದ್ಯ ಗದಗ ವಾರಿಯರ್ಸ್ ಹಾಗೂ ಗದಗ ಸ್ಟ್ರೈಕರ್ಸ್ ನಡುವೆ ನಡೆಯಿತು. ಈ ಪಂದ್ಯದ ಮುಖ್ಯ ಅತಿಥಿಗಳಾಗಿ ಆದರ್ಶ ಶಿಕ್ಷಣ ಸಮಿತಿ ಕಾಲೇಜಿನ ಚೇರಮನ್ ಆನಂದ ಪೋತ್ನಿಸ್ ಮತ್ತು ಯುವ ಕಾಂಗ್ರೆಸ್ ಮುಖಂಡ ಕೃಷ್ಣಗೌಡ ಪಾಟೀಲ ಆಗಮಿಸಿದ್ದರು.
ಹರೀಶ ಕೊಪ್ಪರ, ಶೈಲೇಶ ಬಾಗಮಾರ, ಚಿದಾನಂದ ಕ್ಷತ್ರಿಯ, ಶೈಲೇಶ, ಶಬ್ಬೀರ ನರೇಗಲ್, ಸಚಿನ್ ನಾಯ್ಕ, ಅಹ್ಮದ್ಖಾಜಿ, ಜಗನ್ನಾಥ ಚಾಗಿ, ತಾಹೀರ ಉಮಚಗಿ, ಸಮೀರ ನದಿಮುಲ್ಲಾ ಮತ್ತು ಪೈಜಾನ ಇರಕಲ್ ಇವರು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಗದಗ ವಾರಿಯರ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು. ಗದಗ ವಾರಿಯರ್ಸ್ ತಂಡದ ಓಪನರ್ಗಳಾದ ವಿನಯ ಬಾರಕೇರ 91 ಮತ್ತು ಪವನ ಶಳ್ಳೇದ 116 ರನ್ಗಳ ಆಟ ಪಂದ್ಯಾಟಕ್ಕೆ ವೇಗ ನೀಡಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಗದಗ ಸ್ಟ್ರೈಕರ್ಸ್ನ ಓಪನರ್ಗಳಾದ ಜೈದ್ ಅತ್ತಾರ ಮತ್ತು ರವಿ ರಾಮಗಿರಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಜೈದ್ ಅತ್ತಾರ 73, ರವಿ ರಾಮಗಿರಿ 33, ಕಿಶೋರ 18 ರನ್ ಮಾಡಿ 20 ಓವರ್ಗೆ 6 ವಿಕೆಟ್ ಕಳೆದುಕೊಂಡು 173 ರನ್ ಮಾಡಿ 63 ರನ್ಗಳ ಅಂತರದಿಂದ ಸೋಲನ್ನು ಅನುಭವಿಸಿತು.
ಪಂದ್ಯ ಪುರಷೋತ್ತಮ ಪ್ರಶಸ್ತಿ ವಿನಯ ಬಾರಕೇರ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿ ಜೈದ್ ಅತ್ತಾರ, ಉತ್ತಮ ಬ್ಯಾಟ್ಸಮನ್ ವಿನಯ ಬಾರಕೇರ, ಉತ್ತಮ ಬೌಲರ್ ಕಾರ್ತಿಕ್ ಬಾಗಲಕೋಟೆ, ಉತ್ತಮ ಕ್ಯಾಚ್ ಪ್ರಜ್ವಲ್ ಮಿಟ್ಟಿ, ಎಮರ್ಜಿಂಗ್ ಫ್ಲೇಯರ್ ವೇದಾಂತ ತುರಕಾಣಿ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು.



