HomeGadag Newsರೋಣ ಮತಕ್ಷೇತ್ರದ ಅಭಿವೃದ್ಧಿ ಕಾರ್ಯ, ಅನುದಾನದ ವಿವರ ನೀಡಿದ ಶಾಸಕ ಜಿ.ಎಸ್. ಪಾಟೀಲ

ರೋಣ ಮತಕ್ಷೇತ್ರದ ಅಭಿವೃದ್ಧಿ ಕಾರ್ಯ, ಅನುದಾನದ ವಿವರ ನೀಡಿದ ಶಾಸಕ ಜಿ.ಎಸ್. ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ಡಿ.15ರಂದು ರೋಣ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳ ಉಧ್ಘಾಟನಾ ಸಮಾರಂಭ ನೆರವೇರಲಿದ್ದು, ಈ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಅನೇಕ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಆಗಮಿಸಲಿದ್ದಾರೆ ಎಂದು ಕನಿಜ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಅಮೃತ ಯೋಜನೆಯಡಿ ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳಿಗೆ ಕುಡಿಯುವ ನೀರು ಯೋಜನೆ-6798ಲಕ್ಷ ರೂ.ಗಳು,

ರೋಣ ಪಟ್ಟಣದಲ್ಲಿ ಜಿಟಿಟಿಸಿ ಕಾಲೇಜು ಕಟ್ಟಡ ನಿರ್ಮಾಣ-5000 ಲಕ್ಷ ರೂ.ಗಳು

ಮುನವಳ್ಳಿ ಕೋಟುಮಚಗಿ ರಾಹೆ-83ರ 95,90ಕಿ.ಮೀಯಿಂದ 104.50 ಕಿಮೀ ಹಾಗೂ 107ರಿಂದ 110 ಕಿ.ಮೀವರೆಗೆ ರಸ್ತೆ ಸುಧಾರಣೆ-2000 ಲಕ್ಷ ರೂ.ಗಳು, ಜಕ್ಕಲಿ ಗ್ರಾಮದಲ್ಲಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ನಿರ್ಮಾಣ-995 ಲಕ್ಷ ರೂ.ಗಳು, ಗಜೇಂದ್ರಗಡ ತಾಲೂಕು ಪ್ರಜಾಸೌಧ ಕಟ್ಟಡ ನಿರ್ಮಾಣ-860 ಲಕ್ಷ ರೂ.ಗಳು, ರೋಣ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ-ಬಾಲಕರ ವಸತಿ ನಿಲಯ ಕಟ್ಟಡ ಹಾಗೂ ಗಜೇಂದ್ರಗಡ ಮತ್ತು ನರೇಗಲ್ಲ ಪಟ್ಟಣಗಳಲ್ಲಿ 2 ವಸತಿ ನಿಲಯಗಳ ಪ್ರಾರಂಭೋತ್ಸವ-800 ಲಕ್ಷ ರೂ.ಗಳು, ಡಂಬಳ, ಪೇಠಾಲೂರ, ಜಂತ್ಲಿ ಶಿರೂರ ಗ್ರಾಮಗಳ ಕೆರೆ ಅಭಿವೃದ್ಧಿ ಹಾಗೂ ಸವಡಿ ಹೊನ್ನಾಪೂರ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣ-650 ಲಕ್ಷ ರೂ.ಗಳು, ರೋಣ ಪಟ್ಟಣದಲ್ಲಿ ಪ್ರವಾಸಿ ಮಂದಿರ ಕಟ್ಟಡ-395 ಲಕ್ಷ ರೂ.ಗಳು, ರೋಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಕೊಠಡಿಗಳ ನಿರ್ಮಾಣ ಹಾಗೂ ಡಂಬಳ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ-287 ಲಕ್ಷ ರೂ.ಗಳು, ಡಂಬಳದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ-93.81 ಲಕ್ಷ ರೂ.ಗಳು, ಜಿಗಳೂರ ಕೆರೆ ಪಕ್ಕದಲ್ಲಿ ಪ್ರವಾಸಿ ಉದ್ಯಾನವನ-50 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣವಾಗಲಿವೆ ಎಂದು ತಿಳಿಸಿದ್ದಾರೆ.

ಉದ್ಘಾಟನೆಗೊಳ್ಳುವ ಕಾಮಗಾರಿಗಳು

ಮೇವುಂಡಿ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ, ಗಜೇಂದ್ರಗಡದಲ್ಲಿ ವಸತಿ ನಿಲಯ ಮತ್ತು ರೋಣದಲ್ಲಿ ವಸತಿ ಶಾಲೆ ಪ್ರಾರಂಭೋತ್ಸವ-1000 ಲಕ್ಷ ರೂ.ಗಳು, ರೋಣ, ಗಜೇಂದ್ರಗಡ, ನರೇಗಲ್ಲ ಪಟ್ಟಣಗಳಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ-392.01 ಲಕ್ಷ ರೂ.ಗಳು, ಹಿರೇವಡ್ಡಟ್ಟಿ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಟ್ಟಡ-250 ಲಕ್ಷ ರೂ.ಗಳು, ಸವಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿ ಗೃಹ-91.75 ಲಕ್ಷ ರೂ.ಗಳು, ಅಬ್ಬಿಗೇರಿ ಗ್ರಾಮದ ಸಾರ್ವಜನಿಕ ಗ್ರಂಥಾಲಯ-27.00 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿ ಡಿ.15ರಂದು ಉದ್ಘಾಟನೆಗೊಳ್ಳಲಿವೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!