ಗದಗ:– ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಗದಗ ಮೂಲದ ತಹಸೀಲ್ದಾರ ಜಿ.ಬಿ ಜಕ್ಕಣಗೌಡ್ರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ನಗರಕ್ಕೆ ತಹಸೀಲ್ದಾರ ಜಿ. ಬಿ ಜಕ್ಕಣಗೌಡ್ರ ಪಾರ್ಥಿವ ಶರೀರ ಆಗಮಿಸಿದೆ.
Advertisement
ಗ್ರಾಮಕ್ಕೆ ಪಾರ್ಥಿವ ಶರೀರ ಬರ್ತಿದ್ದಂತೆಯೇ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವೇಳೆ ಮೃತ ತಹಸೀಲ್ದಾರ್ ಸಂಬಂಧಿಕರೋರ್ವರು ಮಾತನಾಡಿ, ತಹಸೀಲ್ದಾರ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ. ಕೆಲಸದ ನಿಮಿತ್ತ ಬೆಂಗಳೂರಗೆ ಹೋಗಿದ್ದರು. ಲಾಡ್ಜ್ ನಲ್ಲಿ ತಂಗಿದ್ದಾಗ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಾಲ್ಕು ದಿನಗಳ ಬಳಿಕ ಮರಣೋತ್ತರ ವರದಿ ಬರಲಿದೆ. ಮೊನ್ನೆ ಕುಟುಂಬಸ್ಥರೊಂದಿಗೆ ಮಾತನಾಡಿದ್ದರು. ದೈಹಿಕವಾಗಿ ಆರಾಮಾಗಿದ್ದರು. ಆದ್ರೆ ವಿಧಿ ಅವರನ್ನ ಬಲಿ ಪಡೆದಿದೆ ಎಂದು ಜಕ್ಕಣಗೌಡ್ರ ಸಂಬಂಧಿಕರು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ.