ಗದಗ:- ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮಂಜಲಾಪೂರ ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ಸುಟ್ಟು ಭಸ್ಮವಾದ ಘಟನೆ ಜರುಗಿದೆ.
ಊರ ಬಳಿಯ ಬಯಲು ಜಾಗದಲ್ಲಿ ಅನ್ನದಾತರು, ಮೆಕ್ಕೆಜೋಳ ಬೆಳೆ ರಾಶಿ ಮಾಡಲು ಒಂದೇ ಕಡೆಗೆ ಸಂಗ್ರಹಿಸಿದ್ದರು. ಅದರಲ್ಲಿ ಕಮಲವ್ವ ಹೊಸಮನಿ, ಶಿರಾಜುದ್ದಿನ್ ಹೊಸಮನಿ, ಪರಮೇಶ ಕಿತ್ಲಿ, ದಾನಪ್ಪ ಲಮಾಣಿ ಅವರ ಮೆಕ್ಕೆಜೋಳ ಸುಟ್ಟು ನಾಶವಾಗಿವೆ.
ಬಿಸಿಲು ಹಾಗೂ ಗಾಳಿ ಪ್ರಮಾಣ ಹೆಚ್ಚಾದ್ದರಿಂದ ಅಕ್ಕ ಪಕ್ಕದ ರಾಶಿಗೂ ಬೆಂಕಿ ತಗುಲಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯರು ಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯಿಂದ ನಾಶವಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದರು.



