ಗದಗ: ಹಲವು ರಾಜಕೀಯ ಜಂಜಾಟಕ್ಕೆ ಕಾರಣವಾಗಿದ್ದ ಗದಗ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕೊನೆಗೂ ಡೇಟ್ ಫಿಕ್ಸ್ ಆಗಿದೆ.
ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಅವರು, ದಿನಾಂಕ ನಿಗದಿಪಡಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಹಲವು ರಾಜಕೀಯ ಹೊಯ್ದಾಟದ ನಂತರ ಕೊನೆಗೂ ಚುನಾವಣೆ ದಿನಾಂಕ ಫಿಕ್ಸ್ ಆಗಿದೆ.
ವಕಾರಸಾಲು ಲೀಸ್ ಪ್ರಕರಣ: ನಗರಸಭೆ ಮಾಜಿ ಅಧ್ಯಕ್ಷೆ ಸೇರಿ ಮೂವರು ಸದಸ್ಯತ್ವ ಸ್ಥಾನದಿಂದ ಅನರ್ಹ
ಶುಕ್ರವಾರ ಬೆಳಗ್ಗೆ ನಗರಸಭೆ ಸದಸ್ಯರಿಗೆ ಚುನಾವಣೆ ನಡೆಸುವ ಕುರಿತು ನೋಟಿಸ್ ತಲುಪಿದ್ದು, ಫೆ. 28 ರಂದು ಮಧ್ಯಾಹ್ನ 2 ಗಂಟೆಗೆ ಚುನಾವಣೆ ನಡೆಸುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಇನ್ನೂ ಇತ್ತೀಚೆಗೆ ನಕಲಿ ಠರಾವು ಸೃಷ್ಟಿಸಿ, ಪೌರಾಯುಕ್ತರ ಸಹಿ ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮೂವರು ಸದಸ್ಯರ ನಗರಸಭಾ ಸದಸ್ಯತ್ವ ರದ್ದುಗೊಳಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದರು. ಹೀಗಾಗಿ ಶೀಘ್ರವೇ ಚುನಾವಣೆ ನಡೆಸುವಂತೆ ಹಲವು ಬಾರಿ ಬಿಜೆಪಿ ಸದಸ್ಯರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಮೂವರು ಸದಸ್ಯರ ಸದಸ್ಯತ್ವ ಸ್ಥಾನದಿಂದ ಅಮಾನತ್ತು ಪ್ರಕ್ರಿಯೆ ನಡೆದ ನಂತರ ಚುನಾವಣೆ ಮುಂದೂಡುವಂತೆ ಸದಸ್ಯರು ರಾಜತಾಂತ್ರಿಕ ನಡೆ ಮೂಲಕ ಒತ್ತಡವನ್ನು ಹಾಕಿದ್ದರು. ಈ ಮಧ್ಯೆ ಚುನಾವಣೆ ನಡೆಸುವ ಕುರಿತು ಗಂಗಪ್ಪ ಅವರು ಆದೇಶ ನೀಡಿದ್ದಾರೆ.
ಸದ್ಯದ ಚುನಾವಣೆ ಪ್ರಕ್ರಿಯೆ ಕುತೂಹಲಕಾರಿ ಘಟ್ಟ ತಲುಪಿದೆ. ಬಿಜೆಪಿ ಸದಸ್ಯರ ಕಾನೂನಾತ್ಮಕ ಹೋರಾಟ ಮುಂದುವರಿಸಿದ್ದಾರೆ. ವಕಾರು ಸಾಲು ಪ್ರಕರಣದಲ್ಲಿ ಬಿಜೆಪಿ ಸದಸ್ಯರ ಅಮಾನತ್ತಿನಿಂದ ನಗರ ಸಭೆಯಲ್ಲಿ ಬಹುಮತವಿದ್ದ ಬಿಜೆಪಿ ಬಲ ಕುಸಿದಿದೆ. ಬಿಜೆಪಿ ಸಂಖ್ಯೆ 15 ಕ್ಕೆ ಕುಸಿದಿದ್ದು, ಕಾಂಗ್ರೆಸ್ ಸದಸ್ಯರು 17 ಜನರಿದ್ದಾರೆ. ರಾಜತಾಂತ್ರಿಕ ನಡೆಯಲ್ಲಿ ಸದ್ಯದ ಮಟ್ಟಿಗೆ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ನಲ್ಲೂ ಹಲವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಸಾಮಾನ್ಯ ವರ್ಗಕ್ಕೆ ಸೀಮಿತವಾದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಲಭಿಸುತ್ತದೆಯೇ ಇಲ್ಲವೇ ಎಂಬುದು ಚುನಾವಣಾವರೆಗೂ ಕಾಯ್ದು ನೋಡಬೇಕಾಗಿದೆ.