ಗದಗ:- ಕಂಟೇನರ್ ಲಾರಿಯೊಂದು ಅಂಡರ್ ಬ್ರಿಡ್ಜ್ ನಲ್ಲಿ ಸಿಲುಕಿದ ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಉಂಟಾದ ಘಟನೆ ಗದಗ ನಗರದ ಪಾಲಾ-ಬದಾಮಿ ರಸ್ತೆಯಲ್ಲಿ ಜರುಗಿದೆ.
ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಕಂಟೇನರ್ ಲಾರಿ ಪಾಸ್ ಆಗಬಹುದು ಎಂದು ಚಾಲಕ ವಾಹನ ಚಲಾಯಿಸಿದ್ದಾನೆ. ಆದ್ರೆ ಲಾರಿ ರೈಲ್ವೆ ಅಂಡರ್ ಬ್ರಿಡ್ಜ್ ಮಧ್ಯದಲ್ಲೇ ಸಿಲುಕಿದೆ. ಈ ಹಿನ್ನೆಲೆ ಸುಮಾರು ಒಂದು ಕಿಲೋ ಮೀಟರ್ ನಷ್ಟು ವಾಹನಗಳು ಸಾಲಾಗಿ ನಿಂತ ದೃಶ್ಯಗಳು ಕಂಡು ಬಂದವು. ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿದೆ.
ಟ್ರಾಫಿಕ್ ಜಾಮ್ ಗೆ ವಾಹನ ಸವಾರರು ಬಳಲಿದ್ದಾರೆ. ಕೊನೆಗೂ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಟ್ರಾಫಿಕ್ ಜಾಮ್ ಕ್ಲಿಯರ್ ನಿಂದ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ.



