ಗದಗ: ನಡುರಸ್ತೆಯಲ್ಲೇ ಸಾರಿಗೆ ಬಸ್ ಒಂದು ಕೆಟ್ಟು ನಿಂತಿದ್ದು, ಚಾಲಕ ಹಾಗೂ ಪ್ರಯಾಣಿಕರು ಪರದಾಡಿರುವ ಘಟನೆ ಗದಗ ನಗರದಲ್ಲಿ ಜರುಗಿದೆ.

ನಗರದ ಪುಟ್ಟರಾಜ್ ಸರ್ಕಲ್‌ನಲ್ಲಿ ರಾಯಚೂರು ವಿಭಾಗದ ಕಲ್ಯಾಣ ಕರ್ನಾಟಕ ಸಾರಿಗೆಯ ಡಕೋಟಾ ಬಸ್ ಸಿಗ್ನಲ್‌ನಲ್ಲಿ ಕೆಟ್ಟು ನಿಂತು ಪ್ರಯಾಣಿಕರಲ್ಲಿ ಆತಂಕವನ್ನು ಹುಟ್ಟಿಸಿತು.
ಲಿಂಗಸಗೂರು–ಕುಷ್ಟಗಿ–ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ಬಸ್ ಚಾಲಕ ಪರದಾಟದಿಂದ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ಸಂದರ್ಭದಲ್ಲಿ ಪ್ರಯಾಣಿಕರು ಸಹಾಯ ಮಾಡಿ ಬಸ್ ತಳ್ಳಿದ ಪರಿಣಾಮ ಕೊನೆಗೂ ಬಸ್ ಸ್ಟಾರ್ಟ್ ಆಗಿ ಮುಂದಕ್ಕೆ ಸಾಗಿತು. ಈ ಘಟನೆ ರಾಜ್ಯ ಸಾರಿಗೆ ಇಲಾಖೆ ನಿರ್ವಹಣೆಯಲ್ಲಿ ಇನ್ನೂ ಹೆಚ್ಚು ಗಮನಕೊಡಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ.



