ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯ ಅಯೋಧ್ಯಾ ಶ್ರೀರಾಮ ಭಕ್ತರು ಫೆ.28ರಂದು ವಿಶೇಷ ರೈಲಿನ ಮೂಲಕ ಅಯೋಧ್ಯೆಗೆ ತೆರಳಿ ಶ್ರೀ ಬಾಲರಾಮ ದೇವರ ದರ್ಶನ ಭಾಗ್ಯ ಪಡೆದು ವಪಸಾದರು.
Advertisement
ರಾಷ್ಟದ ಒಗ್ಗಟ್ಟು, ರಾಷ್ಟ್ರೀಯ ಭಾವನೆ, ಗೌರವವನ್ನು ಎತ್ತಿ ಹಿಡಿದು ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆಯನ್ನು ಮಾಡುವ ಮೂಲಕ ಭಾರತೀಯರ ಹೃದಯ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿರಾಜಮಾನರಾಗಿದ್ದಾರೆ ಎಂದು ಯಾತ್ರಿಕರು ಕೊಂಡಾಡಿದರು.
ಯಾತ್ರೆಯಲ್ಲಿ ರಾಮ ಭಕ್ತರು, ಭಾಜಪ ಕಾರ್ಯಕರ್ತರು, ಗದಗ ಜಿಲ್ಲೆಯ ಮುಖಂಡರು ಪಾಲ್ಗೊಂಡಿದ್ದರು.