ವಿಜಯಸಾಕ್ಷಿ ಸುದ್ದಿ, ಗದಗ: ದಿವಂಗತ ರಾಜೀವ ಗಾಂಧಿ ಅವರು ಭಾರತ ಕಂಡ ಅತ್ಯಂತ ಪ್ರಭಾವಿ, ದೂರದೃಷ್ಟಿ ಚಿಂತನೆಯ ಪ್ರಧಾನಿಯಾಗಿದ್ದರು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರುಕ ಹುಬ್ಬಳ್ಳಿ ಸ್ಮರಿಸಿದರು.
ಅವರು ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಆಚರಿಸಿದ ದಿವಂಗತ ರಾಜೀವ ಗಾಂಧಿ ಅವರ ಪುಣ್ಯತಿಥಿ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಂ.ಬಿ. ನದಾಫ್ ವಕೀಲರು, ಜಿಲ್ಲಾ ಉಪಾಧ್ಯಕ್ಷರು, ಗದಗ ಬೆಟಗೇರಿ ನಗರಸಭೆ ನಾಮನಿರ್ದೇಶಿತ ಸದಸ್ಯರು, ಸರಕಾರಿ ಮಹಾವಿದ್ಯಾಲಯದ ಸಮಿತಿ ಸದಸ್ಯ ಎಂ.ಎನ್. ಶಾಲಗಾರ, ಬೀದಿ ಬದಿ ವ್ಯಾಪಾರಿ ಸಂಘಟನೆ ಮುಖಂಡರಾದ ಅನ್ವರ್ ಶಿರಹಟ್ಟಿ, ಜನತಾ ಬಜಾರ ಸಿಇಒ ಶಂಕರಗೌಡ, ಸಲೀಮ್ ಬಳ್ಳಾರಿ, ಜಾಫರ ಡಾಲಾಯತ, ಇಮಾಮಸಾಬ ಡಾಲಾಯತ, ನಿಜಾಮುದ್ದಿನ ಕಾಟಾಪುರ ಮುಂತಾದವರು ಉಪಸ್ಥಿತರಿದ್ದರು.



