ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ನೌಕರರ ಸಂಘದ ಗದಗ ಜಿಲ್ಲಾಧ್ಯಕ್ಷರಾದ ರವಿ ಎಲ್.ಗುಂಜೀಕರ ಬೆಂಬಲಿತ ಅಭ್ಯರ್ಥಿ, ಗದಗ ಜಿಲ್ಲಾ ನೌಕರರ ಸಂಘದ ಜಿಲ್ಲಾ ಖಜಾಂಚಿ ಚುನಾವಣೆಯಲ್ಲಿ ಆಯ್ಕೆಯಾದ ಗದಗ ಜಿಲ್ಲಾ ಪಂಚಾಯತಿ ಮ್ಯಾನೇಜರ್ ಎಮ್.ಎಮ್. ನಿಟ್ಟಾಲಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
Advertisement
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕ ರಮೇಶ ಎನ್.ಸಜ್ಜಗಾರ, ವಕೀಲರಾದ ಎಸ್.ಎಚ್. ದೊಡ್ಡಮನಿ, ಲಕ್ಷ್ಮಣ ಹುಗ್ಗೆಣ್ಣವರ, ಅಶೋಕ ಹಾದಿ, ಎಸ್.ಎನ್. ಬೀರಕಬ್ಬಿ, ಹುಚ್ಚಪ್ಪ ಸಂದಕದ, ಅಶೋಕ ಕುಡುತನಿ, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೆ.ಪಿ. ಕೋಟಿಗೌಡ್ರ, ಗ್ರಾಮೀಣ ಮುಖಂಡರಾದ ಬೂದಪ್ಪ ಹಳ್ಳಿ, ವಕೀಲಾರದ ಮಂಜುನಾಥ ಶಾಂತಗೇರಿ, ನಾಗರಾಜ್ ಅಬ್ಬಿಗೇರಿ, ರಾಜು ಹೊಂಗಲ್ ಮುಂತಾದವರು ಉಪಸ್ಥಿತರಿದ್ದರು.