ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಬೆಂಗಳೂರು ಇವರು ಜೆ.ಸಿ.ಐ ಗೋಕಾಕ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಯೋಗ ಮತ್ತು ಸಂಸ್ಕೃತಿ ವಿಕಾಸ ಸಂಘ ಗೋಕಾಕ ಇವರ ಸಹಯೋಗದಲ್ಲಿ ಇತ್ತೀಚೆಗೆ ಗೋಕಾಕದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆಸಿದ 4ನೇ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಲೀಗ್ ಸ್ಪರ್ಧೆಗಳಲ್ಲಿ ಗದಗ ಜಿಲ್ಲೆಯಿಂದ ಒಟ್ಟು 30 ಸ್ಪರ್ಧಿಗಳು ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗಿ ಗದಗ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ವಯೋಮಿತಿ ಆಧಾರದ ಮೇರೆಗೆ ಸ್ಪರ್ಧೆಗಳು ನಡೆದಿದ್ದು, ಗದಗ ಜಿಲ್ಲೆಯಿಂದ ಭಾಗವಹಿಸಿದವರಲ್ಲಿ ಚೇತನ ಕೋಟೆಗೌಡ್ರ, ನವೀನ ಪಲ್ಲೇದ, ಗಣೇಶ ವರ್ಣೇಕರ, ಶುಶೃತ ಗುಡಗೂರ, ವೆಂಕಟೇಶ ಹಾಲನ್ನವರ, ಶ್ರೇಯಸ್ ಶೀಲವಂತರ, ಪ್ರಶಾಂತ ಗಾಣಿಗೇರ, ಆಕಾಶ ಗುಡ್ಡಮಠ, ಮಲ್ಲಯ್ಯ ಕಲಹಾಳ, ಬಸವರಾಜ ಗಾಳಪ್ಪನವರ, ಕೆ. ಎಸ್. ಪಲ್ಲೇದ, ಅರ್ಪ ಬೆಟಗೇರಿ, ಶ್ರೀನವನಿಧಿ, ಸೃಷ್ಟಿ ಶಿರಿಯಮ್ಮನವರ, ಗೌರಿ ನೀಲಗುಂದ, ಶ್ರಾವಣಿ ಗುಡಗೂರ, ಲಕ್ಷ್ಮೀ ಬಸರಿ, ಪ್ರೇಮಾಮೃತವಾಣಿ, ದಿವ್ಯಾರಾಣಿ ಸಾಳೇರ, ಸಂಜನಾ ಸಜ್ಜನರ, ನಿರ್ಮಲ ಕೊಟ್ರನ್ನವರ, ಜ್ಯೋತಿ ಶೆಟ್ಟಿ, ಕವಿತಾ ಗಾಳಪ್ಪನವರ, ಶಿಲ್ಪಾ ಅಬ್ಬಿಗೇರಿ, ಚೈತ್ರಾ ಸೋಮನಗೌಡ್ರ, ಸುನಿತಾ ಓಲಿ, ಗೀತಾ ಹೂಗಾರ, ಜಯಶ್ರೀ ಡಾವಣಗೇರಿ, ಕಮಲಾ ಬೆಳ್ಳಿಕೊಪ್ಪ ಎಲ್ಲರೂ ಸ್ಥಾನ ಪಡೆದು ವಿಜೇತರಾಗಿದ್ದಾರೆ.
ಗದುಗಿನ ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆ ಮತ್ತು ನಿತ್ಯಂ ಯೋಗ ಕೇಂದ್ರ ಇವರು ತಂಡ ಪ್ರಶಸ್ತಿ ಪಡೆದಿರುವರು. ತಂಡ ಪ್ರಸ್ತಿಯನ್ನು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಎಲ್.ಜಾರಕಿಹೊಳಿ ವಿತರಿಸಿದರು. ಗದಗ ಜಿಲ್ಲೆಯಿಂದ ಸುಮಂಗಲಾ ಹದ್ಲಿ ನಿರ್ಣಾಯಕರಾಗಿ, ಕೆ.ಎಸ್. ಪಲ್ಲೇದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.
ಜಿಲ್ಲೆಯ ಹಿರಿಮೆ ಹೆಚ್ಚಿಸಿರುವ ಸ್ಪರ್ಧಿಗಳಿಗೆ, ವಿಜೇತರಿಗೆ, ಸಹಕರಿಸಿದ ಪಾಲಕರಿಗೆ, ಸಂಘಟಕರಿಗೆ, ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ, ತರಬೇತುದಾರರೆಲ್ಲರಿಗೂ ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಎಸ್. ಪಲ್ಲೇದ ಮತ್ತು ಸದಸ್ಯರು ಅಭಿನಂದಿಸಿದ್ದಾರೆ.



