ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅಂಚೆ ಇಲಾಖೆಯ ಸೇವೆ ತಲುಪಿಸುವ ಸದಾವಕಾಶ ಲಭಿಸಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಪ್ರತಿಯೊಬ್ಬರ ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಿದೆ ಎಂದು ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ ಅಭಿಪ್ರಾಯಪಟ್ಟರು.
ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ ಜೆ.ಟಿ. ಕಾಲೇಜ್ ಸಭಾಭವನದಲ್ಲಿ ನಡೆದ ಗದಗ ವಿಭಾಗ ಮಟ್ಟದ ಪ್ರಶಸ್ತಿ ವಿತರಣೆ ನೆರವೇರಿಸಿ ಅವರು ಮಾತನಾಡಿದರು.
ಸೇವಾ ವಲಯದಲ್ಲಿ ಹೊಸ ನೀತಿ ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರ ವಿವಿಧ ಮಹತ್ವದ ಯೋಜನೆಗಳನ್ನು ದೇಶದ ಎಲ್ಲೆಡೆ ಪರಿಚಯಿಸಲು ಅಂಚೆ ಇಲಾಖೆ ಬಗೆಗೆ ಒಲವು ತೋರುತ್ತವೆ. ಅಷ್ಟೇ ಅಲ್ಲದೆ ವಿಶೇಷ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ನಮ್ಮ ಇಲಾಖೆಯ ಸಾಧನೆಗಳನ್ನು ದೇಶದ ಎಲ್ಲೆಡೆ ಪ್ರಚುರಪಡಿಸಲು ಸಹಕಾರಿಯಾಗಿದೆ ಎಂದರು.
ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎನ್.ಜಿ. ಭಂಗಿಗೌಡರ ಮಾತನಾಡಿ, ಎಲ್ಲ ಉದ್ಯೋಗಿಗಳು ಪರಸ್ಪರ, ಪ್ರೀತಿ, ವಿಶ್ವಾಸ, ಸ್ನೇಹಪರ ಪಾಲ್ಗೊಳ್ಳುವಿಕೆಯಿಂದಾಗಿ ಗದಗ ವಿಭಾಗೀಯ ಅಂಚೆಯು ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ ಎಂದರು.
ಐಪಿಪಿಬಿ ಉತ್ತರ ಕರ್ನಾಟಕ ವಲಯ ಅಧಿಕಾರಿ ಜಗದೀಶ ಎಚ್.ಚಿಕ್ಕನರಗುಂದ ಮಾತನಾಡಿ, ದೇಶ ಎಲ್ಲೆಡೆ ವಿಶ್ವಾಸಾರ್ಹ, ವಿದ್ಯುನ್ಮಾನ ಹಣಕಾಸು ವಹಿವಾಟು ಸೇವೆ ಕ್ಷೇತ್ರದಲ್ಲಿ ಹೊಸ ಭಾಷ್ಯ ಐಪಿಪಿಬಿ (ಇಂಡಿಯಾ ಪೋಸ್ಟ್ಮೆಂಟ್ ಬ್ಯಾಂಕ್) ದಾಪುಗಾಲು ಇರಿಸಿದೆ ಎಂದರು.
ಜೆ.ಟಿ. ಕಾಲೇಜ್ ಪ್ರಾಚಾರ್ಯ ಜಿ.ಬಿ. ಪಾಟೀಲ್, ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ್ ಜಾಧವ ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಅಂಚೆ ಅಧೀಕ್ಷಕರಾದ ಸುನೀಲಕುಮಾರ, ಶ್ರೀಕಾಂತ ನೀಲಕಂಠಿ, ಪ್ರಧಾನ ಅಂಚೆಪಾಲಕ ಎಂ.ಎನ್. ದಂಗಿನಹಾಳ ಮತ್ತಿತರರು ಇದ್ದರು. ಸವಿತಾ ಕುಬಸದ ಪ್ರಾರ್ಥಿಸಿದರು. ಬಸವರಾಜ ಶೇಡದ, ನಿಂಗಪ್ಪ ಹೂಗಾರ ನಿರೂಪಿದರು.


