ಗದಗ:- ಮೂರು ವರ್ಷದ ಪುಟ್ಟ ಕಂದಮ್ಮನ ಮೇಲೆ ಬೀದಿನಾಯಿ ದಾಳಿ ಮಾಡಿರುವ ಘಟನೆ ಗದಗ ನಗರದ ರೆಹಮತ್ ನಗರದಲ್ಲಿ ಜರುಗಿದೆ.
Advertisement
ನಾಯಿದಾಳಿಗೊಳಗಾದ ಮಗುವನ್ನು ಅದ್ವಿಕ್ ಬೂದಿಹಾಳ (3) ಎಂದು ಗುರುತಿಸಲಾಗಿದೆ. ಸಿಲಿಂಡರ್ ಡಿಲೆವರಿ ಪಡೆದು ಪಾಲಕರು ಮನೆ ಒಳಗೆ ಹೋದಾಗ ಮಗುವಿನ ಮೇಲೆ ಶ್ವಾನ ದಾಳಿ ಮಾಡಿದೆ. ಶ್ವಾನ ದಾಳಿಯಿಂದ ಮಗುವಿನ ಕತ್ತು ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇನ್ನೂ ನಗರದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ಸಂಚರಿಸುವುದೇ ಕಷ್ಟವಾಗಿದೆ. ಜಿಲ್ಲೆಯಲ್ಲಿ ಬಹುತೇಕ ರಸ್ತೆಗಳಲ್ಲಿ ಬೀದಿ ನಾಯಿಗಳು ಹೆಚ್ಚಿದ್ದು, ಹೆಜ್ಜೆ ಹೆಜ್ಜೆಗೂ ಗುರ್ ಎನ್ನುವ ನಾಯಿಗಳು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ.