ಗದಗ:- ನಗರದಲ್ಲಿ ಸೋಮವಾರ ಸುರಿದ ಭಾರೀ ಗಾಳಿ-ಮಳೆಗೆ ವಿದ್ಯುತ್ ಕಂಬ ಹಾಗೂ ಮರವೊಂದು ಧರೆಗುರುಳಿದೆ. ಗದಗ ನಗರದ ಖಾನತೋಟ ಬಡಾವಣೆಯಲ್ಲಿ ಈ ಘಟನೆ ಜರುಗಿದೆ. ಕಳೆದ ಕೆಲ ದಿನದಿಂದ ಸುರಿದ ಮಳೆಯಿಂದಾಗಿ ಮರದ ಬೇರು ಶಿಥಿಲಗೊಂಡಿತ್ತು. ಆದ್ರೆ ರಾತ್ರಿ ಬೀಸಿದ ಗಾಳಿಯಿಂದಾಗಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿದೆ.
ಮರದ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ ಬಾಗಿದಕ್ಕೆ ಆತಂಕ ಮನೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಪರಿಣಾಮ ಖಾನತೋಟ ಬಡಾವಣೆಯಲ್ಲಿ ವಿದ್ಯುತ್ ಸ್ಥಗಿತವಾಗಿದೆ ಎನ್ನಲಾಗಿದೆ.



