ಗದಗ: ಗದಗದ ಪ್ರಖ್ಯಾತ ಸಾಹಿತಿ, ಮಹಿಳಾ ಚಿಂತಕಿ ಹಾಗೂ ನಿವೃತ್ತ ಉಪನ್ಯಾಸಕಿ ಪ್ರೊ. ಕವಿತಾ ಕಾಶಪ್ಪನವರ್ (64) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
Advertisement
ಬುಧವಾರ ರಾತ್ರಿ ತಮ್ಮ ಪಂಚಾಕ್ಷರಿ ನಗರದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಸ್ಯಪ್ರಧಾನ ಬರಹ, ನಾಟಕಗಳಲ್ಲಿ ಸಕ್ರಿಯ ಭಾಗವಹಿಸಿದ್ದ ರಂಗಭೂಮಿ ಕಲಾವಿದೆಯಾಗಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ದೀರ್ಘ ಸೇವೆ, ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕಿಯಾಗಿದ್ದು, ಮಹಿಳಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದರು. ನಿವೃತ್ತಿಯ ನಂತರವೂ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.